Publish Date: Tue, 06 Jun 2017 (08:52 IST)
Updated Date: Tue, 06 Jun 2017 (08:54 IST)
ಲಂಡನ್: ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದ ವೇಳೆ ವಿಐಪಿ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ ಸುದ್ದಿಯನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಮದ್ಯ ದೊರೆ ವಿಜಯ್ ಮಲ್ಯ ಗರಂ ಆಗಿದ್ದಾರೆ.
ಸಾಲ ಮಾಡಿ ತಲೆ ಮರೆಸಿಕೊಂಡಿರುವ ಮಲ್ಯ ಸದ್ಯಕ್ಕೆ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಅವರು ಕಾಣಿಸಿರುವುದನ್ನು ಮಾಧ್ಯಮಗಳು ಫೋಟೋ ಸಮೇತ ಪ್ರಕಟಿಸಿದ್ದವು.
ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಮಲ್ಯ ನಾನು ಟೀಂ ಇಂಡಿಯಾವನ್ನು ಪ್ರೋತ್ಸಾಹಿಸಲು ಮೈದಾನಕ್ಕೆ ಹೋಗಿದ್ದೆನಷ್ಟೇ. ಮುಂದೆಯೂ ಭಾರತ ಆಡುವ ಎಲ್ಲಾ ಪಂದ್ಯಗಳನ್ನು ಮೈದಾನದಲ್ಲೇ ಕುಳಿತು ವೀಕ್ಷಿಸುತ್ತೇನೆ ಎಂದಿದ್ದಾರೆ.