Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಬಗ್ಗೆ ಕಾಮೆಂಟ್ ಮಾಡಲ್ವಂತೆ ರವಿಚಂದ್ರನ್ ಅಶ್ವಿನ್

ರವಿಶಾಸ್ತ್ರಿ ಬಗ್ಗೆ ಕಾಮೆಂಟ್ ಮಾಡಲ್ವಂತೆ ರವಿಚಂದ್ರನ್ ಅಶ್ವಿನ್
Chennai , ಮಂಗಳವಾರ, 18 ಜುಲೈ 2017 (10:22 IST)
ಚೆನ್ನೈ: ಶ್ರೀಲಂಕಾ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಹೊಸ ಕೋಚ್ ನ ಆಗಮನದ ಉತ್ಸಾಹದಲ್ಲಿದೆ. ಆದರೆ ಹೊಸ ಕೋಚ್ ಬಗ್ಗೆ ಯಾವುದೇ ಕಾಮೆಂಟ್ ಮಾಡಲು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿರಾಕರಿಸಿದ್ದಾರೆ.


ಟೀಂ ಇಂಡಿಯಾಗೆ ಹೊಸದಾಗಿ ನೇಮಕವಾದ ಕೋಚ್ ರವಿಶಾಸ್ತ್ರಿ ಬಗ್ಗೆ ಏನನ್ನೂ ಹೇಳಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದಿದ್ದಾರೆ. ‘ಹೊಸ ಕೋಚ್, ಹೊಸ ಸಿಬ್ಬಂದಿಗಳ ನೇಮಕ ನನ್ನ ಪರಿಧಿಗೆ ಬರುವುದಿಲ್ಲ. ಇದು ನನಗೆ ಸಂಬಂಧಿಸಿದ್ದಲ್ಲ. ಹಾಗಾಗಿ ಇದರ ಬಗ್ಗೆ ಕಾಮೆಂಟ್ ಮಾಡಲಾರೆ’ ಎಂದಿದ್ದಾರೆ.

ಹೊಸ ಕೋಚ್ ಜತೆಗೆ ಅಡ್ಜಸ್ಟ್ ಆಗುವ ಬಗ್ಗೆ ಕೇಳಿದ್ದಕ್ಕೆ, ‘ಭಾರತ ತಂಡ ಹಿಂದಿನಂತೆ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಮುನ್ನಡೆಯಲಿದೆ. ಸಮಯ ಕಳೆದಂತೆ ಈ ಹೊಸ ಕಾಂಬಿನೇಷನ್ ಹೇಗೆ ಕೆಲಸ ಮಾಡುತ್ತದೆ ಎಂದು ನಾವು ನೋಡಬೇಕು’ ಎಂದು ನೂತನ ಕೋಚ್ ರವಿಶಾಸ್ತ್ರಿ ಆಯ್ಕೆ ಬಗ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಸರಣಿಗೆ ಮೊದಲು ಅರ್ಧ ತಲೆ ಬೋಳಿಸಿಕೊಂಡ ಹಾರ್ದಿಕ್ ಪಾಂಡ್ಯ