Publish Date: Tue, 18 Jul 2017 (09:15 IST)
Updated Date: Tue, 18 Jul 2017 (09:19 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಆಗಾಗ ವಿನೂತನ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ, ಕೊಹ್ಲಿ, ಜಡೇಜಾ ನಂತರ ಇದೀಗ ಹಾರ್ದಿಕ್ ಪಾಂಡ್ಯ ಹೊಸ ಕೇಶ ವಿನ್ಯಾಸ ಮಾಡಿದ್ದು, ಟ್ರೆಂಡ್ ಸೃಷ್ಟಿಸುತ್ತಿದೆ.
ಈ ಹಿಂದೆ ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಕೂದಲಿಗೆ ಹೊಸ ವಿನ್ಯಾಸ ನೀಡಿದ್ದ ಹೇರ್ ಸ್ಟೈಲಿಶ್ ಹಕೀಂ ಆಲಿಂ ಹಾರ್ದಿಕ್ ಗೆ ಈ ಹೊಸ ಲುಕ್ ಕೊಟ್ಟಿದ್ದಾರೆ. ಇದನ್ನು ಸ್ವತಃ ಪಾಂಡ್ಯ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅರ್ಧ ತಲೆ ಬೋಳಿಸಿಕೊಂಡಂತಿದ್ದರೆ, ಇನ್ನುಳಿದ ಭಾಗದಲ್ಲಿ ಹುಲುಸಾಗಿ ಕೂದಲು ಬೆಳೆಸಿಕೊಂಡಿರುವ ಹಾರ್ದಿಕ್ ಕೇಶ ವಿನ್ಯಾಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ ಇದನ್ನು ಅಭಿಮಾನಿಗಳು ಫಾಲೋ ಮಾಡುವುದಂತೂ ಖಂಡಿತ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ