ಧೋನಿ ನಿವೃತ್ತಿ ಹೀಗಿರಬೇಕು ಎಂದ ರವಿಶಾಸ್ತ್ರಿ

ಗುರುವಾರ, 10 ಅಕ್ಟೋಬರ್ 2019 (09:30 IST)
ಪುಣೆ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಹಲವು ರೂಮರ್ ಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೋಚ್ ರವಿಶಾಸ್ತ್ರಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.


ಪುಣೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರವಿಶಾಸ್ತ್ರಿ ‘ವಿಶ್ವಕಪ್ ಮುಗಿದ ಬಳಿಕ ನಾನು ಧೋನಿಯನ್ನು ಭೇಟಿ ಮಾಡಿಲ್ಲ. ವಿಶ್ವಕಪ್ ಬಳಿಕ ಅವರು ಬಹುಶಃ ಕ್ರಿಕೆಟ್ ಆಡಿಲ್ಲ. ಹೀಗಾಗಿ ನನಗೆ ಅವರ ನಿರ್ಧಾರದ ಬಗ್ಗೆ ತಿಳಿದಿಲ್ಲ’

‘ಒಂದು ವೇಳೆ ಧೋನಿ ನಿವೃತ್ತರಾಗುವುದಿದ್ದರೆ ಅವರಿಗೆ ನಮ್ಮ ಶ್ರೇಷ್ಠ ಕ್ರಿಕೆಟಿಗನೊಬ್ಬನಿಗೆ ಸಿಗುವ ಗೌರವ ಸಿಗಲಿದೆ. ಎರಡು ವಿಶ್ವಕಪ್ ಗೆಲುವು, ಸಿಎಸ್ ಕೆ ಪರವಾಗಿ ಅವರು ಮಾಡಿದ ಸಾಧನೆಗಳು, ಎಲ್ಲವೂ ನಮಗೆ ಮಾದರಿಗಳು. ಒಂದು ವೇಳೆ ಅವರು ಕ್ರಿಕೆಟ್ ಗೆ ಮರಳುವುದಿದ್ದರೂ ನಿವೃತ್ತಿಯಾಗುವುದಿದ್ದರೂ ಅವರಿಗೆ ಬಿಟ್ಟಿದ್ದು’ ರವಿಶಾಸ್ತ್ರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಹಿತ್ ಶರ್ಮಾ ಇದ್ದರೆ ವಿರಾಟ್ ಕೊಹ್ಲಿಗೆ ಗೆಲುವಿನ ಚಿಂತೆಯೇ ಇಲ್ವಂತೆ!