Select Your Language

Notifications

webdunia
webdunia
webdunia
webdunia

ನೀರಸ ಪಂದ್ಯದಲ್ಲೂ ದಾಖಲೆ ಮಾಡಿದ ರವಿಚಂದ್ರನ್ ಅಶ್ವಿನ್

ನೀರಸ ಪಂದ್ಯದಲ್ಲೂ ದಾಖಲೆ ಮಾಡಿದ ರವಿಚಂದ್ರನ್ ಅಶ್ವಿನ್
Antigua , ಶನಿವಾರ, 1 ಜುಲೈ 2017 (10:12 IST)
ಆಂಟಿಗುವಾ: ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ 93 ರನ್ ಗಳಿಂದ ಗೆದ್ದರೂ ಅಂಥಾ ಭರ್ಜರಿ ಗೆಲುವೇನೂ ಆಗಿರಲಿಲ್ಲ. ನೀರಸವಾಗಿ ಸಾಗಿದ್ದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ದಾಖಲೆಯೊಂದನ್ನು ಮಾಡಲು ಯಶಸ್ವಿಯಾದರು.

 
ಕೊನೆಯದಾಗಿ ವಿಂಡೀಸ್ ನ ಕ್ಯುಮಿನ್ಸ್ ವಿಕೆಟ್ ಪಡೆದ ಅಶ್ವಿನ್ ವೇಗವಾಗಿ ಏಕದಿನ ಪಂದ್ಯಗಳಲ್ಲಿ 150 ವಿಕೆಟ್ ಪಡೆದ ದ್ವಿತೀಯ ಭಾರತೀಯ ಸ್ಪಿನ್ನರ್ ಎನಿಸಿದರು. ಮೊದಲನೆಯವರು ಅನಿಲ್ ಕುಂಬ್ಳೆ.

ಅಶ್ವಿನ್ ನಿನ್ನೆಯ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದರು. ಕುಲದೀಪ್ ಯಾದವ್ ಕೂಡಾ ಮೂರು ವಿಕೆಟ್ ಕಿತ್ತಿದ್ದರು. ಧೋನಿ 78 ರನ್ ಗಳಿಸಿ ಮಿಂಚಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಫುಟ್ ಬಾಲ್ ಮಂಡಳಿ!