Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ರ ಈ ನಡೆ ಓದಿದರೆ ಕಣ್ಣೀರು ಬರಬಹುದು!

ರಾಹುಲ್ ದ್ರಾವಿಡ್ ರ ಈ ನಡೆ ಓದಿದರೆ ಕಣ್ಣೀರು ಬರಬಹುದು!
ಮುಂಬೈ , ಸೋಮವಾರ, 26 ಫೆಬ್ರವರಿ 2018 (08:31 IST)
ಮುಂಬೈ: ಭಾರತೀಯ ಕ್ರಿಕೆಟ್ ನ ವಾಲ್ ರಾಹುಲ್ ದ್ರಾವಿಡ್ ಎಂಥಾ ಜಂಟಲ್ ಮ್ಯಾನ್ ಎಂದು ನಮಗೆಲ್ಲಾ ಗೊತ್ತಿರುವ ಸಂಗತಿಯೇ. ಆದರೆ ಅವರು ಇದೀಗ ಮಾಡಿರುವ ಕಾರ್ಯವೊಂದು ಅವರ ಮೇಲಿನ ಅಭಿಮಾನ ದುಪ್ಪಟ್ಟಾಗಿಸಬಹುದು.
 

ಭಾರತ ಅಂಡರ್ 19 ಕ್ರಿಕೆಟ್ ತಂಡಕ್ಕೆ ಕೋಚ್ ಆಗಿರುವ ರಾಹುಲ್ ದ್ರಾವಿಡ್ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಈ ಗೆಲುವಿಗಾಗಿ ಅವರಿಗೆ ಬಿಸಿಸಿಐ ವತಿಯಿಂದ 50 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಇತರ ಸಹಾಯಕ ಸಿಬ್ಬಂದಿಗಳಿಗೆ 25 ಲಕ್ಷ ರೂ. ನೀಡುವುದಾಗಿ ಬಿಸಿಸಿಐ ಘೋಷಣೆಯಾಗಿತ್ತು.

ಆದರೆ ನನ್ನಂತೆ ಎಲ್ಲಾ ಸಹಾಯಕ ಸಿಬ್ಬಂದಿಗಳೂ ಕಷ್ಟಪಟ್ಟಿದ್ದಾರೆ. ನನಗೆ ಮಾತ್ರ 50 ಲಕ್ಷ ರೂ ಬಹುಮಾನ ಬೇಡ ಎಂದಿದ್ದರು. ಆದರೂ ಬಿಸಿಸಿಐ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿರಲಿಲ್ಲ.  ಇದೀಗ ಸ್ವತಃ ದ್ರಾವಿಡ್ ತಮಗೆ ಸಿಕ್ಕಿದ 50 ಲಕ್ಷ ರೂ.ಗಳ ಪೈಕಿ 25 ಲಕ್ಷ ರೂ. ನಗದು ಮಾತ್ರ ಸ್ವೀಕರಿಸುವುದಾಗಿ ಹೇಳಿದ್ದಾರೆ. ಇದು ದ್ರಾವಿಡ್ ರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮುಖ ಆಟಗಾರರನ್ನೆಲ್ಲಾ ಮನೆಗೆ ಕಳುಹಿಸಿದ ಬಿಸಿಸಿಐ!