Select Your Language

Notifications

webdunia
webdunia
webdunia
webdunia

ಶಾಕ್ ಆಗಿ ಕೂತಿದ್ದ ಧೋನಿ, ಇರ್ಫಾನ್ ಪಠಾಣ್ ಗೆ ಸಿನಿಮಾ ತೋರಿಸಿದ್ದ ರಾಹುಲ್ ದ್ರಾವಿಡ್

ಶಾಕ್ ಆಗಿ ಕೂತಿದ್ದ ಧೋನಿ, ಇರ್ಫಾನ್ ಪಠಾಣ್ ಗೆ ಸಿನಿಮಾ ತೋರಿಸಿದ್ದ ರಾಹುಲ್ ದ್ರಾವಿಡ್
ಮುಂಬೈ , ಸೋಮವಾರ, 1 ಜೂನ್ 2020 (09:29 IST)
ಮುಂಬೈ: 2007 ರ ಏಕದಿನ ವಿಶ್ವಕಪ್ ಟೀಂ ಇಂಡಿಯಾಕ್ಕೆ ಈಗಲೂ ದುಸ್ವಪ್ನವೇ. ಅಂದು ಬಾಂಗ್ಲಾ ವಿರುದ್ಧ ಸೋತು ಆಘಾತಕಾರಿಯಾಗಿ ಟೂರ್ನಿಯಿಂದ ಹೊರನಡೆದಿದ್ದ ಘಟನೆಯನ್ನು ಇಂದಿಗೂ ಆಟಗಾರರು ಕರಾಳ ನೆನಪಾಗಿ ನೆನೆಸಿಕೊಳ್ಳುತ್ತಾರೆ.


ಆವತ್ತು ಸೋತ ಬಳಿಕ ಆಟಗಾರರ ಆತ್ಮವಿಶ್ವಾಸ ಪಾತಾಳ ಸೇರಿತ್ತು. ಆವತ್ತು ದ್ರಾವಿಡ್ ಹೇಗೆ ತಮ್ಮನ್ನು ಚಿಯರ್ ಅಪ್ ಮಾಡಿದರು ಎಂಬ ವಿಚಾರವನ್ನು ಇರ್ಫಾನ್ ಪಠಾಣ್ ಸ್ಮರಿಸಿಕೊಂಡಿದ್ದಾರೆ.

‘ಎಲ್ಲರೂ ಗಂಗೂಲಿ, ಅನಿಲ್ ಕುಂಬ್ಳೆ, ಧೋನಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನ ಪ್ರಕಾರ ದ್ರಾವಿಡ್ ಶ್ರೇಷ್ಠ ನಾಯಕರಾಗಿದ್ದರು. ಯಾರೂ ಅವರ ನಾಯಕತ್ವದ ಬಗ್ಗೆ ಹೊಗಳಿ ಮಾತಾಡಲ್ಲ. ಆದರೆ ಅವರ ಕಾಲದಲ್ಲಿ ಆಟಗಾರರ ನಡುವೆ ಸಂವಹನ ಚೆನ್ನಾಗಿತ್ತು. ಎಷ್ಟೋ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದೆವು. ಆದರೆ 2007 ರ ವಿಶ್ವಕಪ್ ಸೋಲು ನಮ್ಮನ್ನು ಕಂಗೆಡಿಸಿತ್ತು. ನಾವೆಲ್ಲಾ ರೂಂನಲ್ಲಿ ಎಲ್ಲವನ್ನೂ ಕಳೆದುಕೊಂಡವರಂತೆ ಕೂತಿದ್ದೆವು. ಆಗ ದ್ರಾವಿಡ್ ನಮ್ಮನ್ನು ‘300’ ಸಿನಿಮಾ ನೋಡಲು ಕರೆದೊಯ್ದರು. ಬಳಿಕ ನನಗೆ ಮತ್ತು ಧೋನಿಗೆ ಇದುವೇ ಜಗತ್ತಿನ ಕೊನೆಯಲ್ಲ. ನೀವಿಬ್ಬರೂ ಸಾಕಷ್ಟು ಕ್ರಿಕೆಟ್ ಆಡಿದ್ದೀರಿ. ಮುಂದೆಯೂ ಆಡಲಿದ್ದೀರಿ. ಇದೊಂದು ಕೆಟ್ಟ ದಿನವಾಗಿತ್ತಷ್ಟೇ. ಮುಂದೆ ನೀವಿಬ್ಬರೂ ತುಂಬಾ ಪಂದ್ಯಗಳನ್ನು ಆಡಿ ಭಾರತಕ್ಕಾಗಿ ಗೆಲುವು ತಂದುಕೊಡಲಿದ್ದೀರಿ ಎಂದು ನಮ್ಮಲ್ಲಿ ಜೀವ ತುಂಬಿದ್ದರು’ ಎಂದು ಪಠಾಣ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆರಂಭಕ್ಕೆ ಬಿಸಿಸಿಐಗೆ ಮತ್ತಷ್ಟು ಬಲ