Select Your Language

Notifications

webdunia
webdunia
webdunia
webdunia

ಪಾಕ್ ವೇಗಿ ಮೊಹಮದ್ ಅಮೀರ್‌ಗೆ ಯುಕೆ ವೀಸಾ

ಪಾಕ್ ವೇಗಿ ಮೊಹಮದ್ ಅಮೀರ್‌ಗೆ ಯುಕೆ ವೀಸಾ
ಇಸ್ಲಮಾಬಾದ್ , ಗುರುವಾರ, 9 ಜೂನ್ 2016 (20:27 IST)
ಪಾಕಿಸ್ತಾನದ ವೇಗಿ ಮೊಹಮದ್ ಅಮೀರ್ ಅವರಿಗೆ ಯುಕೆ ವೀಸಾ ನೀಡಿದ್ದು, ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ತಂಡದ ಜತೆ ಜೂನ್ 18ರಂದು ಪ್ರಯಾಣಿಸಲಿದ್ದಾರೆಂದು ಪಿಸಿಬಿ ಪ್ರಕಟಿಸಿದೆ. 
 
ಅಮೀರ್ ಅವರನ್ನು ಪಾಕಿಸ್ತಾನದ 17 ಆಟಗಾರರ ತಂಡದಲ್ಲಿ ನಾಲ್ಕು ಟೆಸ್ಟ್ ಸರಣಿಗಾಗಿ ಆಯ್ಕೆಮಾಡಲಾಗಿದ್ದು, ಜುಲೈ 14ರಿಂದ ಲಾರ್ಡ್ಸ್‌ನಲ್ಲಿ  ಟೆಸ್ಟ್ ಆರಂಭವಾಗಲಿದೆ. ಆದರೆ 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಅವರಿಗೆ ವೀಸಾ ನೀಡಲಾಗುತ್ತದೋ ಇಲ್ಲವೋ ಎಂಬ ಆತಂಕ ಕಾಡಿತ್ತು. ಈ ಪ್ರಕರಣದಲ್ಲಿ ಅಮೀರ್ ಅವರಿಗೆ ಇಂಗ್ಲೆಂಡ್‌‍ನಲ್ಲಿ  6 ತಿಂಗಳ ಜೈಲು ಶಿಕ್ಷೆ ಮತ್ತು ಐದು ವರ್ಷಗಳ ಅಮಾನತು ಶಿಕ್ಷೆಯನ್ನು ವಿಧಿಸಲಾಗಿತ್ತು
 
ಪಿಸಿಬಿ ಮೇ 20ರಂದು ಅಮೀರ್ ವೀಸಾಗೆ ಅರ್ಜಿ ಸಲ್ಲಿಸಿದ್ದು,  21 ದಿನಗಳ ಬಳಿಕ ಅನುಮೋದನೆ ಸಿಕ್ಕಿದೆ. ಅವರ ಅರ್ಜಿಗೆ ಇಸಿಬಿ ಬೆಂಬಲ ವ್ಯಕ್ತಪಡಿಸಿತ್ತು.  2014ರಲ್ಲಿ ವೈಯಕ್ತಿಕವಾಗಿ ಅಮೀರ್ ಯುಕೆ ವೀಸಾಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. 
 ಅಮೀರ್ ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್ ಆಡುವ ಮೂಲಕ ಟೆಸ್ಟ್ ಕಮ್‌ಬ್ಯಾಕ್ ಆಗಲಿದ್ದಾರೆ. 2010ರಲ್ಲಿ ಇದೇ ಮೈದಾನದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣ ನಡೆದಿತ್ತು. ಆ ಸಂದರ್ಭದಲ್ಲಿ ನಾಲ್ಕು ಟೆಸ್ಟ್ ಸರಣಿಯಲ್ಲಿ 19 ವಿಕೆಟ್ ಕಬಳಿಸಿ ಅತ್ಯಧಿಕ ವಿಕೆಟ್ ಗಳಿಸಿದ್ದರು. ಅವರು ಜೊನಾಥನ್ ಟ್ರಾಟ್ ಜತೆ ಸರಣಿ ಆಟಗಾರ ಪ್ರಶಸ್ತಿಗೂ ಪಾತ್ರರಾಗಿದ್ದರು. 
 
ಪಾಕಿಸ್ತಾನ ತಂಡದಲ್ಲಿ ಅಮೀರ್ ಆಯ್ಕೆಗೆ ತಮ್ಮ ಆಕ್ಷೇಪವೇನೂ ಇಲ್ಲ ಎಂದು ಅಲಸ್ಟೈರ್ ಕುಕ್ ಮತ್ತು ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ತಿಳಿಸಿದ್ದರು. 2010ರಲ್ಲಿ ಅಮೀರ್ ತೋರಿದ ಬೌಲಿಂಗ್ ಕೌಶಲ್ಯವನ್ನು ಬ್ರಾಡ್ ಶ್ಲಾಘಿಸಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕೋಚ್ ಹುದ್ದೆಗೆ ಅನೇಕ ಮಾಜಿ ಕ್ರಿಕೆಟ್ ಪಟುಗಳಿಂದ ಅರ್ಜಿ