ಭಾರತದ ಮುಂದಿನ ಕೋಚ್ ಹುದ್ದೆಗೆ ಬಿಸಿಸಿಐ ಜಾಹೀರಾತಿಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದ್ದು, ಅನೇಕ ಮಂದಿ ಮಾಜಿ ಕ್ರಿಕೆಟ್ ಪಟುಗಳು ಈ ಪ್ರತಿಷ್ಠಿತ ಹುದ್ದೆಗೆ ಅರ್ಜಿ ಹಾಕಿದ್ದಾರೆ. ಭಾರತದ ಮಾಜಿ ಮೀಡಿಯಂ ವೇಗದ ಬೌಲರ್ ಬಲ್ವೀಂದರ್ ಸಿಂಗ್ ಸಾಂಧು ಈ ಸ್ಥಾನಕ್ಕೆ ಅರ್ಜಿ ಹಾಕಿದ ಇತ್ತೀಚಿನ ಮಾಜಿ ಆಟಗಾರ.
ಮಾಜಿ ಮೀಡಿಯಂ ಪೇಸರ್ ವೆಂಕಟೇಶ್ ಪ್ರಸಾದ್ ಬುಧವಾರ ಭಾರತದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತ ಕ್ರಿಕೆಟ್ ಮಂಡಳಿ ಜಾಹೀರಾತನ್ನು ಪೋಸ್ಟ್ ಮಾಡಿದ ಬಳಿಕ ಖ್ಯಾತಿವೆತ್ತ ಹೆಸರುಗಳಾದ ರವಿಶಾಸ್ತ್ರಿ, ಲಾಲ್ ಚಂದ್ ರಜಪೂತ್, ಸಂದೀಪ್ ಪಾಟೀಲ್ ಮತ್ತು ವಿಕ್ರಮ್ ರಾಥೌರ್ ಈ ಹುದ್ದೆಗೆ ಅರ್ಜಿ ಹಾಕಿದ್ದಾರೆ.
ಪ್ರತಿಷ್ಠಿತ ಹುದ್ದೆಗೆ ಅರ್ಜಿ ಹಾಕಿದವರ ಪೈಕಿ ಶಾಸ್ತ್ರಿ ಮುಖ್ಯ ಹೆಸರಾಗಿದ್ದು, ಇನ್ನೊಬ್ಬರು ಮಾಜಿ ಕೋಚ್ ಸಂದೀಪ್ ಪಾಟೀಲ್ ಕೂಡ ಅರ್ಜಿ ಸಲ್ಲಿಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಶಾಸ್ತ್ರಿ ಭಾರತ ತಂಡದ ಜತೆ 18 ತಿಂಗಳು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಐಸಿಸಿ ವಿಶ್ವ ಟ್ವೆಂಟಿ 20 ಬಳಿಕ ಅವರ ಗುತ್ತಿಗೆ ಅವಧಿ ಮುಗಿದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.