Publish Date: Wed, 19 Apr 2017 (09:28 IST)
Updated Date: Wed, 19 Apr 2017 (09:30 IST)
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಟೀಂ ಇಂಡಿಯಾದ್ದೇ ಮಾತು. ಹಾಗಂತ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯೇನಾದ್ರೂ ನಡೆಯುತ್ತಾ ಎಂದು ಕೇಳಬೇಡಿ. ಈ ಖುಷಿಗೆ ಕಾರಣ ಬೇರೆಯೇ ಇದೆ.
ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಉಭಯ ದೇಶಗಳ ನಡುವೆ ಸರಣಿ ನಡೆಯದಿದ್ದರೂ, ಕ್ರಿಕೆಟಿಗರು ಸ್ನೇಹ ಸಂಬಂಧ ಹೊಂದಿದ್ದಾರೆ. ಇದೇ ಸ್ನೇಹದಿಂದ ಟೀಂ ಇಂಡಿಯಾ ಆಟಗಾರರು, ಅಫ್ರಿದಿಗೆ ಆಟಗಾರರ ಸಹಿಯುಳ್ಳ ಟೀಂ ಇಂಡಿಯಾ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು.
ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಪಾಕಿಸ್ತಾನದ ಪತ್ರಕರ್ತರೊಬ್ಬರು ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಬಳಗ ಈ ಜೆರ್ಸಿಯಲ್ಲಿ ನಿಮ್ಮ ಜತೆ ಆಡುವುದು ನಮಗೆ ಯಾವತ್ತೂ ಖುಷಿ ಕೊಡುತ್ತದೆ ಎಂದು ಬರೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ