Publish Date: Wed, 19 Apr 2017 (09:13 IST)
Updated Date: Wed, 19 Apr 2017 (09:16 IST)
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಕ್ರಿಸ್ ಗೇಲ್ ಗೆ ಮದ್ಯ ದೊರೆ, ನಿನ್ನೆಯಷ್ಟೇ ಬಂಧಿತರಾಗಿದ್ದ ವಿಜಯ್ ಮಲ್ಯ ಸ್ಪೆಷಲ್ ಸಂದೇಶ ನೀಡಿದ್ದಾರೆ.
ಅಷ್ಟಕ್ಕೂ ಮಲ್ಯ ಮೆಸೇಜ್ ಮಾಡಿದ್ದಕ್ಕೂ ಅವರ ಪ್ರಕರಣಕ್ಕೂ ಸಂಬಂಧವಿಲ್ಲ ಬಿಡಿ. ಅದಕ್ಕೆ ಬೇರೊಂದು ಕಾರಣವಿತ್ತು. ಗೇಲ್ ಟಿ-20 ಕ್ರಿಕೆಟ್ ಮಾದರಿಯಲ್ಲಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಮಾಡಿದ್ದಾರೆ. ಇದೇ ಕಾರಣಕ್ಕೆ ಅಭಿನಂದಿಸಲು ಮಲ್ಯ ಸಂದೇಶ ರವಾನಿಸಿದ್ದಾರೆ.
ಆರ್ ಸಿಬಿ ತಂಡದ ಮಾಜಿ ಮಾಲಿಕರೂ ಆಗಿರುವ ಮಲ್ಯ ಗೇಲ್ ರನ್ನು ಜಾಗತಿಕ ಬಾಸ್ ಎಂದು ಹೊಗಳಿ ಟ್ವೀಟ್ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಗೇಲ್ ಈ ದಾಖಲೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ