Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ರಂತೆ ನಟಿಸಲು ಸಾಧ್ಯವಿರುವ ಏಕಮಾತ್ರ ನಟನೆಂದರೆ…?!

ಸಚಿನ್ ತೆಂಡುಲ್ಕರ್ ರಂತೆ ನಟಿಸಲು ಸಾಧ್ಯವಿರುವ ಏಕಮಾತ್ರ ನಟನೆಂದರೆ…?!
NewDelhi , ಬುಧವಾರ, 17 ಮೇ 2017 (07:02 IST)
ನವದೆಹಲಿ: ಸಚಿನ್ ತೆಂಡುಲ್ಕರ್ ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನೇ ಆಳಿದವರು. ಅವರೀಗ ಬಾಲಿವುಡ್ ನಲ್ಲಿ ತಮ್ಮದೇ ಆತ್ಮಚರಿತ್ರೆಯ ಸಿನಿಮಾ ಮೂಲಕ ಹೊಸ ಅಲೆ ಸೃಷ್ಟಿಸಲು ಹೊರಟಿದ್ದಾರೆ.

 
‘ಸಚಿನ್ : ಎ ಬಿಲಿಯನ್ ಡ್ರೀಮ್ ಸಿನಿಮಾ ಮುಂದಿನ ವಾರ ತೆರೆ ಕಾಣಲಿದೆ. ಎಲ್ಲಾ ಕ್ರೀಡಾ ತಾರೆಯರಂತೆ ಇದರಲ್ಲಿ ಯಾರೋ ಒಬ್ಬ ನಟ ಸಚಿನ್ ಪಾತ್ರ ಪೋಷಿಸಿಲ್ಲ. ಸ್ವತಃ ತೆಂಡುಲ್ಕರ್ ನಟಿಸಿದ್ದಾರೆ.

ಒಂದು ವೇಳೆ ಸಚಿನ್ ಪಾತ್ರವನ್ನು ಬೇರೊಬ್ಬ ನಟ ನಿಭಾಯಿಸಬೇಕೆಂದರೆ ಯಾರು ಸೂಕ್ತರಾಗುತ್ತಿದ್ದರು? ಈ ಒಂದು ಪ್ರಶ್ನೆಗೆ ಸ್ವತಃ ಸಚಿನ್ ಉತ್ತರಿಸಿದ್ದಾರೆ. ‘ನನ್ನ ಪಾತ್ರವನ್ನು ಮಾಡಲು ನೂರು ಪ್ರತಿಶತ ಅಮೀರ್ ಖಾನ್ ಸೂಕ್ತರಾಗಿರುತ್ತಿದ್ದರು. ಅವರಿಗೆ ಇಂತಹ ಪಾತ್ರಗಳು ಸರಿಯಾಗಿ ಒಪ್ಪುತ್ತದೆ. ಲಗಾನ್ ಅದಕ್ಕೊಂದು ಉದಾಹರಣೆ’ ಎಂದು ಸಚಿನ್ ಹೇಳಿದ್ದಾರೆ.

ಈ ಚಿತ್ರದಲ್ಲಿ ಸಚಿನ್ ರನ್ನು ನಟಿಸಲು ಒಪ್ಪಿಸುವುದಕ್ಕೆ ಚಿತ್ರ ತಂಡಕ್ಕೆ ಭಾರೀ ಕಷ್ಟವಾಯಿತಂತೆ. ನಾನೊಬ್ಬ ನಟನಲ್ಲ ಎನ್ನುವುದು ಸಚಿನ್ ವಾದ. ಕೊನೆಗೆ ಸಚಿನ್ ಜೀವನದ ಏಳು ಬೀಳುಗಳ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿತ್ತು ಎಂದು ತೋರಿಸಲು ಅವರೇ ಸೂಕ್ತ ವ್ಯಕ್ತಿ ಎಂದು ಸಿನಿಮಾ ತಂಡ ಅವರನ್ನು ಒತ್ತಾಯ ಮಾಡಿ ಒಪ್ಪಿಸಿತಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಮಾಡಿದ ಭಾರತೀಯ ಮಹಿಳಾ ಕ್ರಿಕೆಟರ್