Select Your Language

Notifications

webdunia
webdunia
webdunia
webdunia

ದಾಖಲೆ ಮಾಡಿದ ಭಾರತೀಯ ಮಹಿಳಾ ಕ್ರಿಕೆಟರ್

ದಾಖಲೆ ಮಾಡಿದ ಭಾರತೀಯ ಮಹಿಳಾ ಕ್ರಿಕೆಟರ್
NewDelhi , ಮಂಗಳವಾರ, 16 ಮೇ 2017 (09:42 IST)
ನವದೆಹಲಿ: ಐರ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಹೊಸ ಬ್ಯಾಟಿಂಗ್ ದಾಖಲೆ ಮಾಡಿದ್ದಾರೆ.

 
ಭರ್ಜರಿ 188 ರನ್ ಗಳಿಸಿ ಭಾರತಕ್ಕೆ 249 ರನ್ ಗಳ ಬೃಹತ್ ಗೆಲುವು ಕೊಡಿಸಲು ನೆರವಾಗಿದ್ದಾರೆ. ದ. ಆಫ್ರಿಕಾದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 358 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಐರ್ಲೆಂಡ್ 109 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರಾಗಿ ಕಣಕ್ಕಿಳಿದ ದೀಪ್ತಿ ಮೊದಲ ವಿಕೆಟ್ ಗೆ ಪೂನಂ ರಾವತ್ ಜತೆಗೂಡಿ 320 ರನ್ ಕಲೆ ಹಾಕಿದರು. ಪೂನಂ 109 ರನ್ ಸಿಡಿಸಿದರು.  ದೀಪ್ತಿ 160 ಬಾಲ್ ಗಳಲ್ಲಿ 27 ಬೌಂಡರಿ 2 ಸಿಕ್ಸರ್ ಗಳೊಂದಿಗೆ 188 ರನ್ ಗಳಿಸಿದರು.

ದೀಪ್ತಿ ಈಗ ಮಹಿಳಾ ಏಕದಿನ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನ ಆಸ್ಟ್ರೇಲಿಯಾ ಬೆಲಿಂಡಾ ಕ್ಲಾರ್ಕ್ (229ರನ್) ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಫೈನಲ್ ಗೂ ಮೊದಲು ವಿರಾಟ್ ಕೊಹ್ಲಿ ನಡೆಸಲಿದ್ದಾರೆ ಮಹತ್ವದ ಮೀಟಿಂಗ್!