Daily Horoscope

Select Your Language

Notifications

webdunia
webdunia
webdunia
webdunia

ಪದ್ಮ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದ ತಿಳಿಸುವಾಗ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟು ಯಾರಿಗೂ ಗೊತ್ತಾಗಲೇ ಇಲ್ಲ!

ವಿರಾಟ್ ಕೊಹ್ಲಿ
ನವದೆಹಲಿ: 68 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶದ ವಿವಿಧ ಕ್ಷೇತ್ರದ ಸಾಧಕರಿಗೆ ಕೇಂದ್ರ ಸರ್ಕಾರ ಭಾರತದ ನಾಲ್ಕನೇ ಉನ್ನತ ನಾಗರಿಕ ಪ್ರಶಸ್ತಿ ಪದ್ಮ ಪ್ರಶಸ್ತಿಯನ್ನು ಘೋಷಿಸಿತ್ತು. ಪ್ರಶಸ್ತಿ ವಿಜೇತರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಒಬ್ಬರು.

 
ಪದ್ಮ ಪ್ರಶಸ್ತಿ ಲಭಿಸಿದ್ದಕ್ಕೆ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ಧನ್ಯವಾದ ತಿಳಿಸಿದ್ದರು. ಹೀಗೆ ಹೇಳುವಾಗ ಅವರು ಪದ್ಮ ಪ್ರಶಸ್ತಿ ಲಭಿಸಿರುವುದಕ್ಕೆ ಧನ್ಯವಾದಗಳು. ಅದರಲ್ಲೂ ವಿಶೇಷವಾಗಿ ಗಣರಾಜ್ಯೋತ್ಸವದಂದೇ ಲಭಿಸಿರುವುದು ಇನ್ನೂ ಖುಷಿಯಾಗಿದೆ ಎಂದಿದ್ದರು.

ಪದ್ಮ ಪ್ರಶಸ್ತಿಯನ್ನು ಪ್ರತೀ ವರ್ಷವೂ ಗಣರಾಜ್ಯೋತ್ಸವದಂದೇ ನೀಡಲಾಗುತ್ತದೆ. ಆದರೆ ಕೊಹ್ಲಿ ಸಾಹೇಬರು ಮಾತ್ರ ಬೇರೆ ದಿನವೂ ಪದ್ಮ ಪ್ರಶಸ್ತಿ ಕೊಡುತ್ತಾರೆಂದು ಅಂದುಕೊಂಡಿದ್ದಾರೇನೋ.  ಕೊಹ್ಲಿಗೆ ಇದು ನಿಜವಾಗಿಯೂ ಗೊತ್ತಿಲ್ಲದೇ ಹೀಗೆ ಹೇಳಿದರಾ? ಅಂತೂ ಪದ್ಮ ಶ್ರೀ ಪುರಸ್ಕೃತನ ಬಾಯಿಯಿಂದ ಇಂತಹದ್ದೊಂದು ಮಾತು ಬಂದಿರುವುದು ಯಾರ ಗಮನಕ್ಕೂ ಬಾರದೇ ಹೋಗಿರುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳಿನ ಟಿ-ಟ್ವೆಂಟಿ ಪಂದ್ಯಕ್ಕೆ ವಿರಾಟ್ ಕೊಹ್ಲಿ ಕೊಟ್ಟ ಕ್ಲೂ ಇದು!