Select Your Language

Notifications

webdunia
webdunia
webdunia
webdunia

ದುಡ್ಡಿಲ್ಲದೆ ಊಟಕ್ಕೂ ಪರದಾಡುತ್ತಿರುವ ರಾಹುಲ್ ದ್ರಾವಿಡ್ ಹುಡುಗರು!

ದುಡ್ಡಿಲ್ಲದೆ ಊಟಕ್ಕೂ ಪರದಾಡುತ್ತಿರುವ ರಾಹುಲ್ ದ್ರಾವಿಡ್ ಹುಡುಗರು!
Mumbai , ಗುರುವಾರ, 9 ಫೆಬ್ರವರಿ 2017 (06:08 IST)
ಮುಂಬೈ: ಬಿಸಿಸಿಐನಲ್ಲಿ ಅಲ್ಲೋಲಕಲ್ಲೋವಾದ ಮೇಲೆ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್-19 ತಂಡದ ದುಃಸ್ಥಿತಿ ಕೇಳೋರಿಲ್ಲ. ಹೊಸ ಆಡಳಿತ ಮಂಡಳಿ ಬಂದರೂ ಯುವಕರ ತಂಡ ಸ್ವಂತ ಖರ್ಚು ನಿರ್ವಹಿಸಲೂ ಹೆಣಗಾಡುತ್ತಿದೆ.

 
ದಿನಭತ್ಯೆ ಸಿಗದೆ ದ್ರಾವಿಡ್ ಮತ್ತು ಅವರ ತಂಡ ಸ್ವಂತ ಜೇಬಿನಿಂದ ಖರ್ಚು ವೆಚ್ಚ ನೋಡಿಕೊಳ್ಳುವಂತಾಗಿದೆ.  ಆಟಗಾರರಿಗೆ ದಿನ ಭತ್ಯೆ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಚೆಕ್ ಗೆ ಸಹಿ ಹಾಕಬೇಕು. ಆದರೆ ಹಾಕುವವರಿಲ್ಲದೇ ಆಟಗಾರರಿಗೆ ಮತ್ತು ದ್ರಾವಿಡ್ ಗೆ ಸಂಬಳ ಸಿಕ್ಕಿಲ್ಲ.

ಸದ್ಯ ಇಂಗ್ಲೆಂಡ್ ವಿರುದ್ಧ ಸರಣಿ ಆಡುತ್ತಿರುವ ಅಂಡರ್ -19 ತಂಡ ಮುಂಬೈಯ ಐಷಾರಾಮಿ ಹೋಟೆಲ್ ನಲ್ಲಿ ಉಳಿದುಕೊಂಡಿದೆ. ಇವರ ಸಂಕಟ ಅವರ ಬಾಯಿಯಿಂದಲೇ ಕೇಳಬೆಕು. “ಪಂದ್ಯವಿರುವಾಗ ಮಧ್ಯಾಹ್ನ ಊಟವನ್ನು ಅಸೋಸಿಯೇಷನ್ ನೋಡಿಕೊಳ್ಳುತ್ತದೆ. ಬೆಳಗಿನ ಉಪಾಹಾರವನ್ನು ಹೋಟೆಲ್ ನೀಡುತ್ತದೆ. ಆದರೆ ರಾತ್ರಿಯ ಊಟವೇ ಕಷ್ಟವಾಗಿದೆ. ಈ ಐಷಾರಾಮಿ ಹೋಟೆಲ್ ನಲ್ಲಿ ಒಂದು ಸ್ಯಾಂಡ್ ವಿಚ್ ಗೆ 1500 ರೂ. ತೆರಬೇಕು.

ಹಣಕ್ಕೆ ಎಲ್ಲಿ ಹೋಗಬೇಕು? ಹಾಗಾಗಿ ಊಟಕ್ಕಾಗಿ ಹೊರಗೆ ಹೋಗದೆ ಬೇರೆ ದಾರಿಯಿಲ್ಲ” ಎಂದು ಆಟಗಾರರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಪೋಷಕರು ನೀಡುವ ಹಣದಲ್ಲೇ ದೈನಂದಿನ ಖರ್ಚು ನಿಭಾಯಿಸುವ ಅವಸ್ಥೆ ಇವರದ್ದು. ಹಿಂದೆ ಬಹುಶಃ ಯಾವತ್ತೂ ಕ್ರಿಕೆಟಿಗರಿಗೆ ಇಂತಹ ಪರಿಸ್ಥಿತಿ ಎದುರಾಗಿರದು. ಆದರೆ ಬಿಸಿಸಿಐ ಆಡಳಿತದಲ್ಲಿ ಆದ ಬದಲಾವಣೆಯ ನಂತರ ಆಟಗಾರರು ಅದರ ಬಿಸಿ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ನಲ್ಲಿ ಹುಡುಗರೊಂದಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು?!