Select Your Language

Notifications

webdunia
webdunia
webdunia
webdunia

ಹೋಟೆಲ್ ನಲ್ಲಿ ಹುಡುಗರೊಂದಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು?!

ಹೋಟೆಲ್ ನಲ್ಲಿ ಹುಡುಗರೊಂದಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು?!
Hyderabad , ಬುಧವಾರ, 8 ಫೆಬ್ರವರಿ 2017 (11:19 IST)
ಹೈದರಾಬಾದ್: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಇರುವವರೆಲ್ಲಾ ಹೊಸಬರೇ. ಹೊಸದಾಗಿ ತಂಡಕ್ಕೆ ಬರುವವರು ಎಲ್ಲರೊಂದಿಗೆ ಸಹಜವಾಗಿ ಬೆರೆಯಬೇಕಲ್ಲಾ? ಅದಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಹೊಸ ಪರಿಕಲ್ಪನೆ ತರುತ್ತಿದ್ದಾರೆ.

 
ಟೀಂ ಇಂಡಿಯಾ ಈಗ ಕೇವಲ ತಂಡವಲ್ಲ, ಒಂದು ಕುಟುಂಬದವರಂತೆ ಇರಲು ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೋ ಅದೆಲ್ಲವನ್ನೂ ಈ ಇಬ್ಬರೂ ಮಾಡುತ್ತಿದ್ದಾರೆ. ಅದೇ ರೀತಿ ಬಾಂಗ್ಲಾದೇಶ ಟೆಸ್ಟ್ ಪಂದ್ಯಕ್ಕೆ ಮೊದಲು ವಿರಾಟ್ ಕೊಹ್ಲಿ ತಮ್ಮ ತಂಡದ ಯುವ ಆಟಗಾರರೊಂದಿಗೆ ಕುಳಿತು ಉಪಾಹಾರ ಸೇವಿಸಿದ್ದಾರೆ.

ಆ ಮೂಲಕ ತಮ್ಮ ಮತ್ತು ಯುವ ಆಟಗಾರರ ನಡುವೆ ಅಂತರ ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಯುವ ಆಟಗಾರರು ಮನೆಯಂತೇ ಫೀಲ್ ಮಾಡಬೇಕು. ಹೊಂದಿಕೊಂಡು ಹೋಗಬೇಕು ಎನ್ನುವ ಲೆಕ್ಕಾಚಾರ ಕೊಹ್ಲಿಯದ್ದು. ಅಂದ ಹಾಗೆ ಕೊಹ್ಲಿ ಜತೆ ಕುಳಿತು ಬ್ರೇಕ್ ಫಾಸ್ಟ್ ಮಾಡಿದ ಭಾಗ್ಯ ಕೆಎಲ್ ರಾಹುಲ್,  ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್ ರದ್ದು. ಈ ಸಂತಸದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಕೊಹ್ಲಿ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಭಜನ್ ಸಿಂಗ್ ಗೆ ಟೀಂ ಇಂಡಿಯಾದ ನಾಯಕನಾಗುವ ಛಾನ್ಸ್!