Select Your Language

Notifications

webdunia
webdunia
webdunia
webdunia

ಗೌತಮ್ ಗಂಭೀರ್ ಅಲ್ಲ, ಶಿಖರ್ ಧವನ್ ಅಲ್ಲ! ಟೀಂ ಇಂಡಿಯಾದ ಹೊಸ ಆರಂಭಿಕ ಯಾರೆಂದು ಹೇಳಿದ ಅನಿಲ್ ಕುಂಬ್ಳೆ

ಗೌತಮ್ ಗಂಭೀರ್ ಅಲ್ಲ, ಶಿಖರ್ ಧವನ್ ಅಲ್ಲ! ಟೀಂ ಇಂಡಿಯಾದ ಹೊಸ ಆರಂಭಿಕ ಯಾರೆಂದು ಹೇಳಿದ ಅನಿಲ್ ಕುಂಬ್ಳೆ
Hyderabad , ಬುಧವಾರ, 8 ಫೆಬ್ರವರಿ 2017 (09:39 IST)
ಹೈದರಾಬಾದ್: ನಾಳೆಯಿಂದ ಹೈದರಾಬಾದ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಏಕಾಮತ್ರ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಆರಂಭಿಕ ಸ್ಥಾನಕ್ಕೆ ಮೂರನೆಯವರು ಯಾರಾಗಿರುತ್ತಾರೆ ಎಂಬುದನ್ನು ಕೋಚ್ ಅನಿಲ್ ಕುಂಬ್ಳೆ ಬಿಚ್ಚಿಟ್ಟಿದ್ದಾರೆ.

 
ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ಖಾಯಂ ಆರಂಭಿಕರಾಗಿರುತ್ತಾರೆ. ಒಂದು ವೇಳೆ ಇವರಿಬ್ಬರಲ್ಲಿ ಒಬ್ಬರಿಗೆ ಸಮಸ್ಯೆಯಾದರೆ ಬದಲಿ ಆರಂಭಿಕರೊಬ್ಬರು ತಂಡದಲ್ಲಿರಬೇಕಾಗುತ್ತದಲ್ಲವೇ. ಇದಕ್ಕಾಗಿ ಶಿಖರ್ ಧವನ್ ಅಥವಾ ಗೌತಮ್ ಗಂಭೀರ್ ಬದಲಿ ಆಟಗಾರರಾಗಿರುವುದಿಲ್ಲ.

ಬದಲಿಗೆ ತಮಿಳುನಾಡಿನ ಪ್ರತಿಭಾವಂತ ಬ್ಯಾಟ್ಸ್ ಮನ್ ಅಭಿನವ್ ಮುಕುಂದ್ ಬದಲಿ ಆರಂಭಿಕರಾಗಿರುತ್ತಾರಂತೆ. ಫಾರ್ಮ್ ಕಳೆದುಕೊಂಡಿರುವ ಗಂಭೀರ್ ಅಥವಾ ಧವನ್ ಗೆ  ಸ್ಥಾನವಿಲ್ಲ ಎಂದು ಕುಂಬ್ಳೆ ಪರೋಕ್ಷವಾಗಿ ಸೂಚಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಕುಂದ್ ಗೆ ಹೆಚ್ಚು ಅನುಭವವಿರಲಿಕ್ಕಿಲ್ಲ. ಆದರೆ ದೇಶೀಯ ಪಂದ್ಯಗಳಲ್ಲಿ ಸಾಕಷ್ಟು ರನ್ ಗಳಸಿದ್ದಾರೆ. ಹಾಗಾಗಿ ಅವರು ಬದಲಿ ಆಟಗಾರನಾಗಿರುತ್ತಾರೆ ಎಂದಿದ್ದಾರೆ ಕುಂಬ್ಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಂ.1 ಪಟ್ಟಕ್ಕಾಗಿ ದುಶ್ಮನ್ ಗಳಾಗಲಿರುವ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ!