ಮುಂಬೈ: ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಏಕಮಾತ್ರ ಟೆಸ್ಟ್ ಪಂದ್ಯ ಇದೀಗ ಒಂದು ಕಾರಣಕ್ಕೆ ಮಹತ್ವ ಪಡೆಯಲಿದೆ. ಈ ಪಂದ್ಯದಲ್ಲಿ ನಂ.1 ಪಟ್ಟಕ್ಕಾಗಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪರಸ್ಪರ ಸೆಣಸಾಡಲಿದ್ದಾರೆ.
ಸದ್ಯ ಟೀಂ ಇಂಡಿಯಾದ ಸ್ಪಿನ್ ಧ್ವಯರಿಬ್ಬರೂ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಮತ್ತು ನಂ.2 ಸ್ಥಾನದಲ್ಲಿದ್ದಾರೆ. ಅಶ್ವಿನ್ ಮೊದಲ ಸ್ಥಾನದಲ್ಲಿದ್ದರೆ, ಜಡೇಜಾಗೆ ಸದ್ಯಕ್ಕೆ ಎರಡನೇ ಸ್ಥಾನ. ಜಡೇಜಾ ಕೇವಲ 8 ಅಂಕಗಳಿಂದ ಹಿನ್ನಡೆಯಲ್ಲಿದ್ದಾರೆ.
ಒಂದು ವೇಳೆ ಬಾಂಗ್ಲಾ ವಿರುದ್ಧ ಜಡೇಜಾ ಉತ್ತಮ ಪ್ರದರ್ಶನ ನೀಡಿದರೆ ಅಶ್ವಿನ್ ರನ್ನು ಹಿಂದಿಕ್ಕಿ ತಾವೇ ನಂ.1 ಬೌಲರ್ ಆಗಬಹುದು. ಇದನ್ನು ಹೊರತುಪಡಿಸಿದರೆ ಈ ಪಂದ್ಯದ ಫಲಿತಾಂಶ ತಂಡದ ಶ್ರೇಯಾಂಕದ ಮೇಲೆ ಯಾವುದೇ ಪರಿಣಾಮ ಬೀರದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ