ಮುಂಬೈ: ಟೀಂ ಇಂಡಿಯಾ ಗಾಯಾಳುಗಳ ಪಟ್ಟಿಗೆ ಮತ್ತಷ್ಟು ಹೆಸರು ಸೇರ್ಪಡೆಯಾಗಿದೆ. ಈಗಾಗಲೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟಗಾರರ ದೊಡ್ಡ ಲಿಸ್ಟ್ ಇದೆ. ಅದರ ಜತೆಗೆ ಹೊಸ ಸೇರ್ಪಡೆ ಅಕ್ಸರ್ ಪಟೇಲ್.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಹತ್ತಿರ ಬರುತ್ತಿದ್ದಂತೆ ಸೀಮಿತ ಓವರ್ ಗಳ ಆಟಗಾರರು ಹೀಗೆ ಒಬ್ಬೊಬ್ಬರಾಗಿ ಗಾಯಗೊಳ್ಳುತ್ತಿರುವುದು ಚಿಂತೆಗೆ ಕಾರಣವಾಗಿದೆ. ಈಗಾಗಲೇ ಪ್ರಮುಖ ಬೌಲರ್ ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಜಯಂತ್ ಯಾದವ್ ಗೆ ವಿಶ್ರಾಂತಿ ನೀಡಲು ಟೀಂ ಇಂಡಿಯಾ ನಿರ್ಧರಿಸಿದೆ.
ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಗಾಯಗೊಂಡು ಟೆಸ್ಟ್ ಸರಣಿಯಲ್ಲೂ ಪಾಲ್ಗೊಂಡಿಲ್ಲ. ಅಕ್ಸರ್ ಪಟೇಲ್ ರಣಜಿ ಟ್ರೋಫಿ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಪ್ರಮುಖ ಆಟಗಾರರೆಲ್ಲಾ ಗಾಯಗೊಂಡಿರುವುದರಿಂದ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರರಿಗೆಲ್ಲಾ ಉತ್ತಮ ಅವಕಾಶ ಲಭ್ಯವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ