Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗಾಗಿ ನಿಯಮವನ್ನೇ ಬದಲಿಸಲಿದೆಯಾ ಐಸಿಸಿ?

ವಿರಾಟ್ ಕೊಹ್ಲಿ
Dubai , ಮಂಗಳವಾರ, 27 ಡಿಸೆಂಬರ್ 2016 (08:58 IST)
ದುಬೈ: ವಿರಾಟ್ ಕೊಹ್ಲಿಯನ್ನು ವರ್ಷದ ಟೆಸ್ಟ್ ತಂಡದಿಂದ ಕೈ ಬಿಟ್ಟ ಐಸಿಸಿ ಅದಕ್ಕೆ ತಕ್ಕ ಬೆಲೆ ತೆತ್ತಿದೆ.  ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿಯನ್ನು ಟೆಸ್ಟ್ ತಂಡದಿಂದ ಕೈ ಬಿಟ್ಟಿದ್ದಕ್ಕೆ ವಿಶ್ವದಾದ್ಯಂತ ಅಭಿಮಾನಿಗಳ ಟೀಕೆಗೆ ಗುರಿಯಾಗಗಿದೆ. ಹೀಗಾಗಿ ತಂಡದ ಪಟ್ಟಿ ಪ್ರಕಟಿಸುವ ನಿಯವನ್ನೇ ಬದಲಿಸಲು ಚಿಂತನೆ ನಡೆಸುತ್ತಿದೆ.


ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಆಗಿರುವ             ಟೀಂ ಇಂಡಿಯಾದ ರವಿಚಂದ್ರನ್ ಅಶ್ವಿನ್ ಮಾತ್ರ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಕೊಹ್ಲಿ ಈ ವರ್ಷ 1000 ಕ್ಕೂ ಅಧಿಕ ರನ್ ಪೇರಿಸಿದರೂ, ನಂ.2 ಬ್ಯಾಟ್ಸ್ ಮನ್ ಆಗಿದ್ದರೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದೇ ಇದ್ದಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದೀಗ ತನ್ನ ನಿಯಮದಲ್ಲೇ ಬದಲಾವಣೆ ತರಲು ಐಸಿಸಿ ಚಿಂತನೆ ನಡೆಸುತ್ತಿದೆ. ಸೆಪ್ಟೆಂಬರ್ ನಿಂದ ಸೆಪ್ಟೆಂಬರ್ ತಿಂಗಳವರೆಗಿನ ಅವಧಿಯ ಪರ್ಫಾರ್ಮೆನ್ಸ್ ಗಮನಿಸಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಈ ತಂಡವನ್ನು ಅಕ್ಟೋಬರ್ ನಲ್ಲಿಯೇ ಪ್ರಕಟಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. 2013 ರವರೆಗೆ ಇದು ಹಾಗೆಯೇ ಇತ್ತು. ಇನ್ನು ಇದೇ ನಿಯಮವನ್ನು ಮರಳಿ ಜಾರಿಗೆ ತರಲು ಐಸಿಸಿ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಕ್ರಿಕೆಟ್ ನಲ್ಲೀಗ ಈ ಸಿಖ್ ಹುಡುಗನದ್ದೇ ಮಾತು