Select Your Language

Notifications

webdunia
webdunia
webdunia
webdunia

ಕಪಿಲ್ ಶರ್ಮಾ ಶೋದಿಂದ ಸಿಧು ನಿರ್ಗಮನ

Navjot Singh Sidhu
ನವದೆಹಲಿ , ಗುರುವಾರ, 22 ಸೆಪ್ಟಂಬರ್ 2016 (15:27 IST)
ಕಪಿಲ್ ಶರ್ಮಾ ನಡೆಸಿಕೊಡುವ ಜನಪ್ರಿಯ ಹಾಸ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕ್ರಿಕೆಟಿಗ ಪರಿವರ್ತಿತ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ಇನ್ನು ಮುಂದೆ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. 

ಸಿಧು ಅವರ ಪತ್ನಿ  ನವಜೋತ್ ಕೌರ್ ಈ ಶಾಕಿಂಗ್ ಸುದ್ದಿಯನ್ನು ದೃಢೀಕರಿಸಿದ್ದಾರೆ. 
 
ಪಂಜಾಬ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗುವಿನ ಗುರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. 
 
ಮಾಜಿ ಸಂಸದ ಭರ್ಜರಿಯಾಗಿಯೇ ರಾಜಕಾರಣಕ್ಕೆ ಮರಳಲು ಬಯಸಿದ್ದು ಅಕ್ಟೋಬರ್ 1 ಕ್ಕೆ ಅಮೃತಸರ್ ತಲುಪಲಿರುವ ಅವರು ತಮ್ಮ ಪಕ್ಷ ಆವಾಜ್-ಇ- ಪಂಜಾಬ್‌ಗಾಗಿ  ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 
 
ಇನ್ನು ಸಿಧು ಸಂಪೂರ್ಣವಾಗಿ ಪಂಜಾಬ್ ರಾಜಕೀಯದ ಕಡೆ ಗಮನ ಹರಿಸಲಿದ್ದಾರೆ. ಹೀಗಾಗಿ ಸೆಪ್ಟೆಂಬರ್ 30ರವರೆಗಿನ ಎಲ್ಲ ಶೋಗಳನ್ನು ಅವರು ಈಗಾಗಲೇ ರೆಕಾರ್ಡ್ ಮಾಡಿ ಮುಗಿಸಿದ್ದು, ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿಯಾಗಿದೆ ಎಂದು ಸಿಧು ಪತ್ನಿ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ನಿವೃತ್ತಿ ನಿರ್ಧಾರದ ಹಿಂದಿನ ಗುಟ್ಟು ರಟ್ಟು