Select Your Language

Notifications

webdunia
webdunia
webdunia
webdunia

ಪರೀಕ್ಷೆಗೆ ಸಿದ್ಧ ಎಂದ ಮಹಮ್ಮದ್ ಹಫೀಜ್

ಪರೀಕ್ಷೆಗೆ ಸಿದ್ಧ ಎಂದ ಮಹಮ್ಮದ್ ಹಫೀಜ್
Karachi , ಮಂಗಳವಾರ, 25 ಅಕ್ಟೋಬರ್ 2016 (09:44 IST)
ಕರಾಚಿ: ಐಸಿಸಿ ನಡೆಸುವ ಬೌಲಿಂಗ್ ಪರೀಕ್ಷೆಗೆ ತಾನು ಸಿದ್ಧವಾಗಿದ್ದೇನೆಂದು ಪಾಕಿಸ್ತಾನದ ಅನುಭವಿ ಬೌಲರ್ ಮಹಮ್ಮದ್ ಹಫೀಜ್ ಹೇಳಿಕೊಂಡಿದ್ದಾರೆ.

ಇದುವರೆಗೆ ತಾನು 100 ಪ್ರತಿಶತ ಫಿಟ್ ಆಗಿರಲಿಲ್ಲ. ಹೀಗಾಗಿ ಪರೀಕ್ಷೆಯನ್ನು ಮುಂದೂಡುತ್ತಲೇ ಇದ್ದೆ. ಈಗ ನಾನು ಫಿಟ್ ಆಗಿದ್ದು ಐಸಿಸಿ ಯಾವಾಗ ಬೌಲಿಂಗ್ ಶೈಲಿ ಪರೀಕ್ಷೆ ನಡೆಸಬೇಕೆಂದು ತೀರ್ಮಾನಿಸುತ್ತದೋ ಆಗ ತಯಾರಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

 35 ವರ್ಷದ ಹಫೀಜ್ ಪಾಕಿಸ್ತಾನದ ಪರ 50 ಟೆಸ್ಟ್ ಮತ್ತು 177 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರ ಬೌಲಿಂಗ್ ಶೈಲಿ ಅಕ್ರಮ ಎಂಬ ಕಾರಣಕ್ಕೆ ಕಳೆದ ವರ್ಷ ಅವರು ಐಸಿಸಿಯಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. 

ಸದ್ಯ ದೇಶೀಯ ಕ್ರಿಕೆಟ್ ಆಡುತ್ತಿರುವ ಹಫೀಜ್ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರಂತೆ.  ಬೌಲಿಂಗ್ ಶೈಲಿ ಐಸಿಸಿಗೆ ತೃಪ್ತಿಕರವೆನಿಸಿದರೆ ಮತ್ತೆ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮರಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೋಧಾ-ಬಿಸಿಸಿಐ ಜಗಳದಲ್ಲಿ ಐಪಿಎಲ್ ಬಡವಾಯ್ತು