Select Your Language

Notifications

webdunia
webdunia
webdunia
webdunia

ಲೋಧಾ-ಬಿಸಿಸಿಐ ಜಗಳದಲ್ಲಿ ಐಪಿಎಲ್ ಬಡವಾಯ್ತು

ಲೋಧಾ-ಬಿಸಿಸಿಐ ಜಗಳದಲ್ಲಿ ಐಪಿಎಲ್ ಬಡವಾಯ್ತು
NewDelhi , ಮಂಗಳವಾರ, 25 ಅಕ್ಟೋಬರ್ 2016 (09:18 IST)
ನವದೆಹಲಿ: ಲೋಧಾ ಸಮಿತಿ ಮತ್ತು ಬಿಸಿಸಿಐ ನಡುವಿನ ಹಗ್ಗ ಜಗ್ಗಾಟದಲ್ಲಿ ಬಲಿಯಾಗುತ್ತಿರುವುದು ಐಪಿಎಲ್. ಲೋಧಾ ಸಮಿತಿ ಶಿಫಾರಸ್ಸಿನ ಇಫೆಕ್ಟ್ ಇದು.

ಲೋಧಾ ಸಮಿತಿಯ ವರದಿಯಂತೆ ಸುಪ್ರೀಂ ಕೋರ್ಟ್ ಬಿಸಿಸಿಐಗೆ ದೀರ್ಘ ಕಾಲದ ಯೋಜನೆಗಳನ್ನು ಕೈಗೊಳ್ಳದಿರಲು ಸೂಚಿಸಿದೆ. ಅಲ್ಲದೆ ಡಿಸೆಂಬರ್ 3 ರ ಒಳಗಾಗಿ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ. ಹೀಗಾಗಿ ಐಪಿಎಲ್ ನೇರ ಪ್ರಸಾರದ ಹಕ್ಕು ನೀಡುವ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮುಂದೂಡಲು ಬಿಸಿಸಿಐ ನಿರ್ಧರಿಸಿದೆ.

ಟಿವಿ ಪ್ರಸಾರ ಮತ್ತು ಡಿಜಿಟಲ್ ಹಕ್ಕುಗಳ ಬಿಡ್ಡಿಂಗ್ ಇಂದು ಮುಂಬೈಯಲ್ಲಿ ನಡೆಯಬೇಕಿತ್ತು. ಕಂಪನಿಗಳೂ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿದ್ದವು.

ಈ ಕುರಿತು ಸ್ಪಷ್ಟನೆ ಕೇಳಲು ಲೋಧಾ ಸಮಿತಿಗೆ ಬಿಸಿಸಿಐ ಈಮೇಲ್ ಕಳುಹಿಸಿತ್ತು. ಇದಕ್ಕೆ ಉತ್ತರಿಸಿದ ಲೋಧಾ ಸಮಿತಿ ಸುಪ್ರೀಂ ಕೋರ್ಟ್ ಆದೇಶದಂತೆ ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ಏಕದಿನಕ್ಕೆ ಟೀಂ ಇಂಡಿಯಾ ಪ್ರಕಟ