Publish Date: Wed, 26 Oct 2016 (11:35 IST)
Updated Date: Wed, 26 Oct 2016 (11:39 IST)
ರಾಂಚಿ: ನ್ಯೂಜಿಲೆಂಡ್ ವಿರುದ್ಧ ಇಂದು ರಾಂಚಿಯಲ್ಲಿ ನಡೆಯಲಿರುವ ಏಕದಿನ ಪಂದ್ಯ ನಾಯಕ ಎಂ ಎಸ್ ಧೋನಿ ತವರಿನಲ್ಲಿ ಆಡುವ ಕೊನೇ ಆಟವಾ? ಹೀಗೊಂದು ಅನುಮಾನ ಕಾಡುತ್ತಿದೆ.
35 ವರ್ಷದ ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರು ಮೊದಲಿನಂತೆ ಆಡುತ್ತಿಲ್ಲ. ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಸ್ವತಃ ಧೋನಿ ಕೂಡಾ ತನ್ನಲ್ಲಿ ಮೊದಲಿನಂತೆ ಸ್ಟ್ರೈಕ್ ರೊಟೇಟ್ ಮಾಡುವ ಶಕ್ತಿ ಉಳಿದಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಧೋನಿ ಪಾಲಿಗೆ ರಾಂಚಿ ಕೊನೆಯ ಪಂದ್ಯವಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಭಾರತ ಎರಡು ಕಾರಣಕ್ಕೆ ಈ ಪಂದ್ಯ ಗೆಲ್ಲಬೇಕಾಗಿದೆ. ಭಾರತ ಇಂದು ಗೆದ್ದರೆ ಸರಣಿ ಗೆಲುವು ಸಿಗುತ್ತದೆ ಮತ್ತು ಧೋನಿ ಕೊನೆಯ ಪಂದ್ಯವಾಗಬಹುದು ಎಂಬ ಕಾರಣಕ್ಕಾಗಿಯೂ ಭಾರತ ಗೆಲ್ಲಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ