ಜನಾಂಗೀಯ ನಿಂದನೆ ಮೊಹಮ್ಮದ್ ಸಿರಾಜ್ ರ ಕಟ್ಟು ಕತೆ: ಭಾರತೀಯ ಮೂಲದ ಅಭಿಮಾನಿ ಹೇಳಿಕೆ

Webdunia
ಬುಧವಾರ, 13 ಜನವರಿ 2021 (09:23 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ರನ್ನು ಕೆಲವು ಆಸ್ಟ್ರೇಲಿಯಾದ ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಆಸ್ಟ್ರೇಲಿಯನ್ ಅಭಿಮಾನಿಯೊಬ್ಬರ ಹೇಳಿಕೆ ಈಗ ಮಹತ್ವ ಪಡೆದಿದೆ.


ಪ್ರತೀಕ್ ಕೇಳ್ಕರ್ ಎಂಬ ಅಭಿಮಾನಿ ಸೇರಿದಂತೆ ಆರು ಮಂದಿಯನ್ನು ಸಿರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೈದಾನದಿಂದ ಹೊರಹಾಕಿದ್ದರು. ಇದೀಗ ಘಟನೆ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಪ್ರತೀಕ್ ‘ಅಲ್ಲಿದ್ದವರು ವೆಲ್ ಕಮ್ ಟು ಸಿಡ್ನಿ ಸಿರಾಜ್’ ಎಂದಿದ್ದರಷ್ಟೇ. ಜನಾಂಗೀಯ ನಿಂದನೆಯೆಲ್ಲಾ ಕಟ್ಟು ಕತೆ. ಸಿರಾಜ್ ತಮ್ಮ ಬೌಲಿಂಗ್ ನಲ್ಲಿ ಎರಡೆರಡು ಸಿಕ್ಸರ್ ಹೊಡೆಸಿಕೊಂಡ ಮೇಲೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಈ ರೀತಿ ಕಟ್ಟು ಕತೆ ಹೇಳಿದ್ದಾರೆ’ ಎಂದು ಆಪಾದಿಸಿದ್ದಾರೆ. ಜನಾಂಗೀಯ ನಿಂದನೆ ಆರೋಪದ ಬಗ್ಗೆ ಇದೀಗ ಐಸಿಸಿ ತನಿಖೆ ನಡೆಸುತ್ತಿದೆ. ಅದಾದ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಮುಂದಿನ ಸುದ್ದಿ
Show comments