Publish Date: Sun, 16 Feb 2020 (09:19 IST)
Updated Date: Sun, 16 Feb 2020 (09:21 IST)
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ವಿಕೆಟ್ ಕೀಳಲು ವಿಫಲರಾದ ಜಸ್ಪ್ರೀತ್ ಬುಮ್ರಾರನ್ನು ಟೀಕಿಸಿದವರಿಗೆ ಸಹ ಕ್ರಿಕೆಟಿಗ ಮೊಹಮ್ಮದ್ ಶಮಿ ತಿರುಗೇಟು ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಬುಮ್ರಾ, ಶಮಿ ಸೇರಿದಂತೆ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರ ಬಳಿಕ ಮಾಧ‍್ಯಮಗಳಿಗೆ ಪ್ರತಿಕ್ರಿಯಿಸಿರುವ ಶಮಿ ಕೇವಲ 2-4 ಪಂದ್ಯಗಳಿಂದಲೇ ಬುಮ್ರಾರಂತಹ ಪ್ರತಿಭಾವಂತರನ್ನು ಟೀಕಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೆಲವರು ಇನ್ನೊಬ್ಬರನ್ನು ಟೀಕೆ ಮಾಡಿಯೇ ಕಮಾಯಿ ಮಾಡುತ್ತಾರೆ. ಬುಮ್ರಾ ಒಂದೆರಡು ಪಂದ್ಯಗಳಲ್ಲಿ ಪ್ರದರ್ಶನ ನೀಡಿಲ್ಲ ಎಂಬ ಮಾತ್ರಕ್ಕೆ ಅವರು ಹಿಂದೆ ಮಾಡಿದ ಸಾಧನೆಗಳನ್ನು, ಅವರ ಸಾಮರ್ಥ್ಯವನ್ನು ಮರೆತು ಮಾತನಾಡುವುದು ಸರಿಯಾ ಎಂದು ಶಮಿ ಖಡಕ್ ತಿರುಗೇಟು ನೀಡಿದ್ದಾರೆ.