ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಪೆರೇಡ್

ಶುಕ್ರವಾರ, 14 ಫೆಬ್ರವರಿ 2020 (12:07 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಇಲೆವೆನ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ.


ಟೀಂ ಇಂಡಿಯಾ ಪರ ಹನುಮ ವಿಹಾರಿ ಶತಕ ಮತ್ತು ಚೇತೇಶ್ವರ ಪೂಜಾರ 93 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲಾ ಕಳಪೆ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಇದರಿಂದಾಗಿ ಟೀಂ ಇಂಡಿಯಾ 263 ರನ್ ಗಳಿಗೆ ಆಲೌಟ್ ಆಗಿದೆ. ಇಲ್ಲಿಗೆ ಇಂದಿನ ದಿನದಾಟವೂ ಮುಕ್ತಾಯವಾಗಿದೆ.

ಅದರಲ್ಲೂ ನಾಲ್ವರು ಬ್ಯಾಟ್ಸ್ ಮನ್ ಗಳು ಶೂನ್ಯ ಸುತ್ತಿರುವುದು ವಿಶೇಷ. ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಶಬ್ನಂ ಗಿಲ್ ಮತ್ತು ಪೃಥ್ವಿ ಶಾ ಇಬ್ಬರೂ ಶೂನ್ಯ ಸಂಪಾದನೆ ಮಾಡಿರುವುದರಿಂದ ಮೊದಲ ಟೆಸ್ಟ್ ಪಂದ್ಯಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ತಲೆನೋವು ಮುಂದುವರಿದಿದೆ. ಹೀಗಾಗಿ ಬ್ಯಾಟ್ಸ್ ಮನ್ ಗಳಿಗೆ ಮೊದಲ ಇನಿಂಗ್ಸ್ ನಲ್ಲಿ ಪ್ರಾಕ್ಟೀಸ್ ಸಿಗಲಿಲ್ಲ ಎಂದೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಗೆಲುವಿಗೆ 149 ರನ್ ಗಳ ಗುರಿ