Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ನೋಡಿದರೆ ಗಂಗೂಲಿಗೆ ಯಾಕೆ ಹೊಟ್ಟೆ ಉರಿ?!

webdunia
ಶುಕ್ರವಾರ, 14 ಫೆಬ್ರವರಿ 2020 (09:33 IST)
ಮುಂಬೈ: ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಜತೆಯಾಗಿ ಅದೆಷ್ಟೋ ಜತೆಯಾಟವಾಡಿದ್ದ ಜೋಡಿ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ. ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಇವರಿಬ್ಬರ ಸ್ನೇಹ ಮಾತ್ರ ಇನ್ನೂ ಹಾಗೇ ಉಳಿದಿದೆ.


ಅವಕಾಶ ಸಿಕ್ಕಾಗಲೆಲ್ಲಾ ಇವರು ಸಾಮಾಜಿಕ ಜಾಲತಾಣದ ಮೂಲಕ ಒಬ್ಬರ ಕಾಲು ಇನ್ನೊಬ್ಬರು ಎಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ನಿನ್ನೆ ಸಚಿನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸಿಡ್ನಿಯಲ್ಲಿ ಬಿಸಿಲಿಗೆ ಮೇಲೆ ನೋಡುತ್ತಾ ಮೈ ಸೋಕಿಸುತ್ತಾ ಕುಳಿತಿರುವ ಫೋಟೋ ಒಂದನ್ನು ಹಾಕಿಕೊಂಡಿದ್ದರು.

ಇದನ್ನು ನೋಡಿದ ಗಂಗೂಲಿ ‘ನೋಡಿ ಕೆಲವರಿಗೆ ಎಷ್ಟೆಲ್ಲಾ ಅದೃಷ್ಟವಿರುತ್ತದೆ. ಹೀಗೇ ರಜಾ ಮಜಾ ಮಾಡುತ್ತಲೇ ಇರು’ ಎಂದು ತಮಾಷೆಯಾಗಿ ಹೊಟ್ಟೆ ಉರಿ ಪಟ್ಟುಕೊಂಡವರಂತೆ ಮೆಸೇಜ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ‘ಹೌದಪ್ಪಾ ಈ ರಜೆ ಪುಕ್ಸಟೆ ಆಗಿರಲಿಲ್ಲ. ನಾವು 10 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದೆವು’ ಎಂದು ಬುಶ್ ಫೈರ್ ಕ್ರಿಕೆಟ್ ನಲ್ಲಿ ಸಂಗ್ರಹವಾದ ಹಣದ ಬಗ್ಗೆ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ.

ಇವರಿಬ್ಬರ ಈ ಹಾಸ್ಯದ ಚಟಾಕಿಗೆ ಧ್ವನಿಗೂಡಿಸಿದ ಹರ್ಭಜನ್ ಸಿಂಗ್ ಕೂಡಾ ಸಚಿನ್ ಮೇಲೆ ನೋಡುತ್ತಿರುವ ಭಂಗಿಯನ್ನು ಕುರಿತು ತಮಾಷೆ ಮಾಡಿದ್ದು ‘ಪಾಜಿ ಯಾವ ಮಹಡಿಗೆ ನಿಮ್ಮ ಟಾರ್ಗೆಟ್’ ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಟೆಸ್ಟ್ ಸರಣಿಗೂ ಮೊದಲು ಪತ್ನಿ ಅನುಷ್ಕಾ ಜತೆ ಕಾಡು ಸುತ್ತಿದ ವಿರಾಟ್ ಕೊಹ್ಲಿ