ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪ್ರಮುಖ ಬೌಲರ್ ಎನ್ನುವುದೇನೋ ನಿಜ. ಆದರೆ ಅವರಿಗೆ ಆಡಲು ಅವಕಾಶ ಸಿಕ್ಕಿದ್ದೇ ಕಡಿಮೆ. ಟೆಸ್ಟ್ ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯುವ ವೇಗಿ ಏಕದಿನ ಪಂದ್ಯದಲ್ಲಿ ಆಡುವ ಅದೃಷ್ಟ ಮಾಡಿಲ್ಲವೇನೋ ಏನೋ ಎಂಬಂತಿದ್ದರು.
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಗೆ ಫಿಟ್ ಆಗಿದ್ದರೂ ಆಡುವ ಅವಕಾಶ ಮಾತ್ರ ಅವರಿಗೆ ಸಿಗಲಿಲ್ಲ. ಇಂಗ್ಲೆಂಡ್ ನ ವೇಗದ ಪಿಚ್ ಗಳಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಗದೇ ಬೆಂಚ್ ಕಾಯಿಸಿದ್ದ ಶಮಿಗೆ ಕೊನೆಗೂ ವಿಂಡೀಸ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ.
ಇಷ್ಟು ಬಾರಿ ತಂಡಕ್ಕೆ ಆಯ್ಕೆಯಾದರೂ 2015 ರ ನಂತರ ಇದೇ ಮೊದಲ ಬಾರಿಗೆ ಅವರು ಏಕದಿನ ಪಂದ್ಯವಾಡಿದ್ದಾರೆ. 2015 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದೇ ಅವರ ಕೊನೆಯ ಏಕದಿನ ಪಂದ್ಯವಾಗಿತ್ತು. ಅದಾದ ಮೇಲೆ ನಿನ್ನೆಯಷ್ಟೇ ಅವರು ಏಕದಿನ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು.
ವೇಗಿ ಭುವನೇಶ್ವರ್ ಕುಮಾರ್ ಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಶಮಿಯನ್ನು ಕಣಕ್ಕಿಳಿಸಲಾಗಿತ್ತು. ಒಟ್ಟು 47 ಏಕದಿನ ಪಂದ್ಯವಾಡಿರುವ ಶಮಿ 87 ವಿಕೆಟ್ ಗಳಿಸಿದ್ದಾರೆ. 10 ಓವರ್ ಬೌಲ್ ಮಾಡಿದ ಶಮಿ 33 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ