Publish Date: Mon, 03 Jul 2017 (09:33 IST)
Updated Date: Mon, 03 Jul 2017 (09:35 IST)
ನವದೆಹಲಿ: ಪ್ರತಿಭಾವಂತ ರಿಷಬ್ ಪಂತ್ ರನ್ನು ಆಡಿಸುತ್ತೇನೆಂದು ಆಸೆ ತೋರಿಸುತ್ತಾರೆಯೇ ವಿನಹ ಇನ್ನೂ ತಂಡದೊಳಕ್ಕೆ ಸೇರಿಸಿಕೊಳ್ಳುವ ಯೋಚನೆಯೇ ಮಾಡದ ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಸರಿಯಾಗಿಯೇ ಜಾಡಿಸಿದ್ದಾರೆ.
ಸದ್ಯಕ್ಕೆ ಕೋಚ್ ಇಲ್ಲದ ಟೀಂ ಇಂಡಿಯಾಕ್ಕೆ ಕೊಹ್ಲಿಯೇ ಬಾಸ್. ಹಾಗಾಗಿ ತಂಡದ ಸಂಪೂರ್ಣ ಹೊಣೆ ಅವರದ್ದು. ನಿನ್ನೆಯ ಪಂದ್ಯದಲ್ಲಿ ಸೋತ ಮೇಲಂತೂ ಅಭಿಮಾನಿಗಳ ಸಿಟ್ಟು ನೆತ್ತಿಗೇರಿದೆ. ನಿನ್ನೆ ಗೆದ್ದಿದ್ದರೆ ಸರಣಿ ಗೆಲ್ಲಬಹುದಾಗಿತ್ತು. ಆದರೆ ತೃತೀಯ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದ ಕೊಹ್ಲಿ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೃತೀಯ ಪಂದ್ಯದಲ್ಲೇ ರಿಷಬ್ ಪಂತ್ ರನ್ನು ಆಡಿಸಬಹುದೆಂದು ಕಾದಿದ್ದ ಅಭಿಮಾನಿಗಳು ನಾಲ್ಕನೇ ಪಂದ್ಯದಲ್ಲೂ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗೆ ಅವಕಾಶ ನೀಡದೇ ಇರುವುದಕ್ಕೆ ಜಾಡಿಸಿದ್ದಾರೆ. ಟಾಸ್ ಆದ ಮೇಲೆ ಆಡುವ ಹನ್ನೊಂದರ ಬಳಗ ಘೋಷಣೆಯಾದ ಕೂಡಲೇ ಟ್ವಿಟರ್ ನಲ್ಲಿ ಕೊಹ್ಲಿ ವಿರುದ್ಧ ಅಭಿಮಾನಿಗಳು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಸಮಸ್ಯೆಯೇನು ಕೊಹ್ಲಿ? ಯಾಕೆ ಪ್ರತಿಭಾವಂತ ರಿಷಬ್ ರನ್ನು ಆಡಿಸಿಲ್ಲ? ರಿಷಬ್ ಇನ್ನೆಷ್ಟು ದಿನ ಕಾಯಬೇಕು? ಅವರಿಗೆ ಒಂದೇ ಒಂದು ಚಾನ್ಸ್ ಕೊಡಲ್ವಾ ಎಂದು ಕೊಹ್ಲಿಯನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ