Publish Date: Wed, 22 Mar 2017 (10:09 IST)
Updated Date: Wed, 22 Mar 2017 (10:13 IST)
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಸ್ಸೀಮರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವೇಗಿ ಮಿಚೆಲ್ ಸ್ಟಾರ್ಕ್ ಮಾತು ಮಾತ್ರ ಮಿತಿ ಮೀರಿದೆ.
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಲೆಗೇ ಬಾಲ್ ಎಸೆಯುತ್ತೇನೆ ಎಂದು ಸ್ಟಾರ್ಕ್ ಹೇಳಿಕೊಂಡಿದ್ದಾರೆ. “ನಾನು ಅಶ್ವಿನ್ ಮುಂದಿನ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡುವುದನ್ನೇ ಕಾಯುತ್ತಿದ್ದೇನೆ. ಈ ಸರಣಿಗೆ ಮೊದಲು ಅವರ ಬಗ್ಗೆ ಬೇಕಾದಷ್ಟು ಹೊಗಳಿಕೆ ಕೇಳಿದ್ದೇವೆ. ಆದರೆ ನಾವು ಎಲ್ಲದನ್ನೂ ಮೀರಿ ನಡೆದಿದ್ದೇವೆ. ನನ್ನ ಗುರಿ ಅವರ ಹೆಲ್ಮೆಟ್ ಆಗಿರುತ್ತದೆ” ಎಂದು ಸ್ಟಾರ್ಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಔಟಾದಾಗ ಆರ್. ಅಶ್ವಿನ್ ಕೈ ಬೀಸಿ ಸೆಂಡ್ ಆಫ್ ಕೊಟ್ಟಿದ್ದರು. ಬಹುಶಃ ಇದೇ ಸೇಡು ಇಟ್ಟುಕೊಂಡು ಸ್ಟಾರ್ಕ್ ಈ ರೀತಿಯ ವೈಷಮ್ಯದ ಹೇಳಿಕೆ ನೀಡಿದ್ದಾರೆ. ಆ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಅಶ್ವಿನ್ ಸ್ಟಾರ್ಕ್ ವಿಕೆಟ್ ಕಿತ್ತಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ