Publish Date: Wed, 22 Mar 2017 (07:54 IST)
Updated Date: Wed, 22 Mar 2017 (07:58 IST)
ದುಬೈ: ಇದುವರೆಗೆ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯದ್ದು ಮಾತ್ರ ಸದ್ದು ಕೇಳಿಸುತ್ತಿತ್ತು. ಆದರೆ ಈಗ ಕೊಹ್ಲಿಯನ್ನೇ ಮೀರಿಸುವ ಆಟಗಾರ ಬಂದಿದ್ದಾರೆ. ಅವರು ಚೇತೇಶ್ವರ ಪೂಜಾರ.
ಪ್ರಸಕ್ತ ಐಸಿಸಿ ಬಿಡುಗಡೆ ಮಾಡಿದ ಟೆಸ್ಟ್ ಶ್ರೇಯಾಂಕದಲ್ಲಿ ಪೂಜಾರ ಕೊಹ್ಲಿಯನ್ನು ಹಿಂದಿಕ್ಕಿ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಆರನೇ ಕ್ರಮಾಂಕದಲ್ಲಿ ಪೂಜಾರ ದಿಡೀರ್ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಕೊಹ್ಲಿಗಿಂತ ಎರಡು ಸ್ಥಾನ ಮೇಲೇರಿದ್ದಾರೆ.
ಇನ್ನು, ಬೌಲರ್ ಗಳ ಪಟ್ಟಿಯಲ್ಲೂ ರವಿಚಂದ್ರನ್ ಅಶ್ವಿನ್ ರನ್ನು ಹಿಂದಿಕ್ಕಿ, ರವೀಂದ್ರ ಜಡೇಜಾ ನಂ.1 ಸ್ಥಾನ ಪಡೆದಿದ್ದಾರೆ. ಸದ್ಯ ಜಡೇಜಾ 904 ಅಂಕ ಗಳಿಸಿದ್ದಾರೆ. ಇನ್ನು ತಂಡಗಳ ಅಂಕ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿ ಮುಂದುವರಿದಿದೆ. ದ್ವಿತೀಯ ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಮತ್ತು ದ. ಆಫ್ರಿಕಾ ನಡುವೆ ಪೈಪೋಟಿ ಏರ್ಪಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ