ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತ್ರವಲ್ಲ, ಮಾಧ್ಯಮಗಳೂ ದಾಳಿ ಮುಂದುವರಿಸಿವೆ. ಇದೀಗ ಕೊಹ್ಲಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೋಲಿಸುವ ಮೂಲಕ ಉದ್ಧಟತನ ಮೆರೆದಿವೆ.
ಅಮೆರಿಕಾ ಅಧ್ಯಕ್ಷರಂತೆ ಕೊಹ್ಲಿ ಕೂಡಾ ಅತಿರೇಕದ ವರ್ತನೆ ಮಾಡುತ್ತಾರೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಮಾಧ್ಯಮಗಳ ಮೇಲೆ ಹುಳುಕು ಹಾಕುತ್ತಾರೆ. ಅವರೊಂಥರಾ ಕ್ರಿಕೆಟ್ ನ ಡೊನಾಲ್ಡ್ ಟ್ರಂಪ್ ರಂತೆ ಎಂದು ಆಸೀಸ್ ಮಾಧ್ಯಮಗಳು ಹೇಳಿಕೊಂಡಿವೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಆಸೀಸ್ ಮಾಧ್ಯಮಗಳು ತಂಡದ ಸಹಾಯಕ ಸಿಬ್ಬಂಧಿಗಳಿದ್ದಂತೆ. ಅವರ ಕಾಮೆಂಟ್ ಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ