ನವದೆಹಲಿ: ಈ ಬಾರಿಯ ಐಪಿಎಲ್ ಆರಂಭವಾಗುವ ಮೊದಲೇ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಶಾಕಿಂಗ್ ಕೊಡುವ ಸುದ್ದಿ ಬಂದಿದೆ.
ಪ್ರಮುಖ ಆಟಗಾರ ದ. ಆಫ್ರಿಕಾದ ಜೆ ಪಿ ಡುಮಿನಿ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ ಪಂದ್ಯಾವಳಿಯಿಂದ ಹಿಂದಕ್ಕೆ ಸರಿದಿದ್ದಾರೆ. 2014 ರಿಂದ ಡುಮಿನಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸ್ಥಿರ ಸದಸ್ಯ. 2015 ರಲ್ಲಿ ತಂಡದ ನಾಯಕರಾಗಿದ್ದವರು.
ಹೀಗಾಗಿ ಡುಮಿನಿ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ನಿಜಕ್ಕೂ ತುಂಬಲಾರದ ನಷ್ಟ. ಆದರೆ ಬೇರೆ ದಾರಿಯಿಲ್ಲ. ನಾನು ಆಡಲಾಗುತ್ತಿಲ್ಲ ಎಂದು ಡುಮಿನಿ ತಂಡಕ್ಕೆ ತಿಳಿಸಿದ್ದಾರೆ. ಆದರೆ ಡೆಲ್ಲಿ ತಂಡದ ಅಭಿಮಾನಿಗಳಿಗೆ ಮಾತ್ರ ತೀರಾ ನಿರಾಸೆಯಾಗುವುದು ಸಹಜ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ