Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ ಬಗ್ಗೆ ಮೂರ್ಖರಾಗುತ್ತಿರುವ ಮಾಧ್ಯಮಗಳು

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ ಬಗ್ಗೆ ಮೂರ್ಖರಾಗುತ್ತಿರುವ ಮಾಧ್ಯಮಗಳು

ಕೃಷ್ಣವೇಣಿ ಕೆ

ಬೆಂಗಳೂರು , ಶುಕ್ರವಾರ, 30 ಡಿಸೆಂಬರ್ 2016 (12:55 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾಗುತ್ತಾರೆ, ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ, ಬೇರೆಯಾಗುತ್ತಾರೆ, ಒಂದಾಗುತ್ತಾರೆ… ಅಬ್ಬಾ ಹೀಗೇ ಮಾಧ್ಯಮಗಳು ಅದೆಷ್ಟು ಬಾರಿ ತಾವೇ ಮೂರ್ಖರಾಗಿ ಜನರನ್ನೂ ಮೂರ್ಖರಾಗಿಸುತ್ತಾ ಬಂದು ಮೂರು ವರ್ಷವಾಯಿತು.


ಆದರೆ ಇವರಿಬ್ಬರು ಹಾಗೇ ಕೈ ಕೈ ಹಿಡಿದು ಓಡಾಡುತ್ತಲೇ ಇರುತ್ತಾರೆ. ಮಾಧ್ಯಮಗಳೂ ಪದೇ ಪದೇ ಇವರ ಹಿಂದೆ ಬಿದ್ದು ಏಟು ತಿನ್ನುತ್ತಲೇ ಇದೆ. ಆದರೂ ಅವರಿಬ್ಬರು ಮಾತ್ರ ಏನೂ ಗುಟ್ಟು ಬಿಡುಕೊಡುತ್ತಿಲ್ಲ.

ಹಿಂದೊಮ್ಮೆ ಕೊಹ್ಲಿ-ಅನುಷ್ಕಾ ಬೇರೆಯಾಗುತ್ತಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು. ಆಗ ಕೊಹ್ಲಿಯಾಗಲೀ, ಅನುಷ್ಕಾ ಆಗಲಿ ಮಗಮ್ಮಾಗಿದ್ದರಿಂದ ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಹುಟ್ಟಿಕೊಂಡವು. ಕೊನೆಗೊಮ್ಮೆ ಅತಿರೇಕಕ್ಕೆ ಹೋದಾಗ ಕೊಹ್ಲಿ ಹಾಗೆ ಲೇಖನ ಬರೆದ ಪತ್ರಕರ್ತ ಅಂದುಕೊಂಡು ಬೇರೊಬ್ಬ ಮಾಧ್ಯಮ ಪ್ರತಿನಿಧಿ ಮೇಲೆ ಹರಿಹಾಯ್ದ ಘಟನೆಯೂ ಭಾರೀ ಸುದ್ದಿ ಮಾಡಿತ್ತು.

ಇದಾದ ಮೇಲೆ ಏನಾಯಿತೋ ಮತ್ತೆ ಅವರು ಕೈ ಕೈ ಹಿಡಿದು ಓಡಾಡಲು ಪ್ರಾರಂಭಿಸಿದ ಮೇಲೆ ಮತ್ತೊಮ್ಮೆ ಮದುವೆ ಬಗ್ಗೆ ಗಾಳಿ ಸುದ್ದಿಗಳು ಹರಿದಾಡತೊಡಗಿದವು.  ಬಹುಶಃ ಇಬ್ಬರೂ ಇಷ್ಟೊಂದು ಸುದೀರ್ಘ ಸಮಯ ಜತೆಯಾಗಿ ಸಮಯ ಕಳೆದಿದ್ದು ಇಲ್ಲವೇನೋ. ಅದಕ್ಕೇ ಈಗ ನಿಶ್ಚಿತಾರ್ಥದ ಸುದ್ದಿ ಹಬ್ಬಿದೆ. ಟೀಕೆ ಮಾಡುವವರಂತೂ ಅವರ ಮದುವೆ ವಿಷಯ ಕುಟುಂಬದವರಿಗಿಂತ ಮಾಧ್ಯಮಗಳಿಗೇ ಅರ್ಜೆಂಟಾಗಿದೆ ಎಂದರು. ಆದರೂ ಅವರ ಬಗ್ಗೆ ಓದುವುದನ್ನೂ ಮಾತ್ರ ಬಿಡಲಿಲ್ಲ.

ಇದೀಗ ಡೆಹ್ರಾಡೂನ್ ನಲ್ಲಿ ನೆಲೆಸಿರುವ ಅನುಷ್ಕಾ ಅಜ್ಜಿ ಕೂಡಾ ಮೊಮ್ಮಗಳು ನಿಶ್ಚಿತಾರ್ಥದ ಸುದ್ದಿಯೇನೂ ಹೇಳಿರಲಿಲ್ಲ. ಅಂತಹ ಯೋಜನೆ ಇದ್ದಿದ್ದರೆ ಹೇಳುತ್ತಿದ್ದಳು ಎಂದಿದ್ದಾರೆ. ಅಲ್ಲದೆ ಸ್ವತಃ ಕೊಹ್ಲಿಯೇ ಮಾಧ್ಯಮಗಳ ಸುಳ್ಳು ಸುದ್ದಿಗೆ ಫುಲ್ ಸ್ಟಾಪ್ ಇಡಲು ನಾನೇ ಸ್ಪಷ್ಟನೆ ನೀಡುವುದಾಗಿ ನಿಶ್ಚಿತಾರ್ಥ ಇಲ್ಲ ಎಂದಿದ್ದಾರೆ.

ನಿಜವಾಗಿಯೂ ಇವರು ನಿಶ್ಚಿತಾರ್ಥ ಯಾವಾಗ ಮಾಡಿಕೊಳ್ಳುತ್ತಾರೆ, ಅಥವಾ ಮದುವೆಯಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮಾಧ್ಯಮಗಳು ಮಾತ್ರ ಕೆಲವು ಮೂಲಗಳ ಮಾಹಿತಿಯನ್ನು ನಂಬಿ ಮೋಸ ಹೋಗುತ್ತಿವೆ. ಜನರೂ ಮೂರ್ಖರಾಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾರೊಂದಿಗೆ ನಿಶ್ಚಿತಾರ್ಥ ವರದಿಗಳು ಆಧಾರ ರಹಿತ: ವಿರಾಟ್ ಸ್ಪಷ್ಟನೆ