Select Your Language

Notifications

webdunia
webdunia
webdunia
webdunia

ಅನುಷ್ಕಾರೊಂದಿಗೆ ನಿಶ್ಚಿತಾರ್ಥ ವರದಿಗಳು ಆಧಾರ ರಹಿತ: ವಿರಾಟ್ ಸ್ಪಷ್ಟನೆ

ಅನುಷ್ಕಾರೊಂದಿಗೆ ನಿಶ್ಚಿತಾರ್ಥ ವರದಿಗಳು ಆಧಾರ ರಹಿತ: ವಿರಾಟ್ ಸ್ಪಷ್ಟನೆ
ಡೆಹರಾಡೂನ್ , ಶುಕ್ರವಾರ, 30 ಡಿಸೆಂಬರ್ 2016 (12:07 IST)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಜನೆವರಿ 1 ರಂದು ನಿಶ್ಚಿತಾರ್ಥವಾಗಲಿದೆ ಎನ್ನುವ ವರದಿಗಳು ಆಧಾರರಹಿತವಾಗಿವೆ. ಒಂದು ವೇಳೆ ನಿಶ್ಚಿತಾರ್ಥ ಮಾಡಿಕೊಳ್ಳುವ ಉದ್ದೇಶವಿದ್ದಲ್ಲಿ ಅದನ್ನು ಮುಚ್ಚಿಡುವುದಿಲ್ಲ ಎಂದು ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.  
 
ಖಾಸಗಿ ಚಾನೆಲ್‌ಗಳನ್ನು ಆಧಾರರಹಿತ ಉಹಾಪೋಹ ಸುದ್ದಿಗಳನ್ನು ಹರಡುತ್ತಿರುವುದನ್ನು ನಿಲ್ಲಿಸುತ್ತಿಲ್ಲ. ಇದೀಗ ಟ್ವೀಟ್ ಮಾಡಿ ಸತ್ಯ ಸಂಗತಿಯನ್ನು ಟ್ವೀಟ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
 
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜನೆವರಿ 1 ರಂದು ಮಧ್ಯ ರಾತ್ರಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ವರದಿಗಳು ಕ್ರಿಕೆಟ್ ಮತ್ತು ಬಾಲಿವುಡ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.
 
ಕಳೆದ ಡಿಸೆಂಬರ್ 24 ರಂದು ಉತ್ತರಾಖಂಡ್‌ಗೆ ಆಗಮಿಸಿದ್ದ ವಿರಾಟ್ ಮತ್ತು ಅನುಷ್ಕಾ ನೇರವಾಗಿ ಸ್ಪಾ ರಿಸಾರ್ಟ್‌ಗೆ ತೆರಳಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದರು. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಯಾವುದೇ ಸಂವಾದ ನಡೆಸಲಿಲ್ಲ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತೆಲಂಗಾಣ ರಾಜ್ಯಕ್ಕೆ ಬರಲಿದೆ ಪ್ರತ್ಯೇಕ ಕ್ರಿಕೆಟ್ ಸಂಸ್ಥೆ!