ಲಕ್ನೋ: ಐಪಿಎಲ್ 2025ರ ಆವೃತ್ತಿಯಲ್ಲಿ ತಮ್ಮ ವಿಶಿಷ್ಟ ಸಂಭ್ರಮಾಚರಣೆಗೆ ಸುದ್ದಿಯಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ ಇದೀಗ ಅದೇ ಸಿಗ್ನೇಚರ್ ಸೆಲೆಬ್ರೇಶನ್ ಅನ್ನು ಮುಂದುವರೆಸಿದ್ದಾರೆ.
ಈ ಹಿಂದೆ ಸೈನ್ ಆಫ್ ಆಚರಣೆಯನ್ನು ಮಾಡಿ, ಭಾರೀ ಮೊತ್ತದ ದಂಡವನ್ನು ಮಂಡಳಿ ವಿಧಿಸಿತ್ತು. ಆದರೆ ಈ ಬಾರೀ ಸೆಲೆಬ್ರೇಶನ್ ಮಾಡಿದ ರೀತಿ ಬದಲಾಗಿದೆ. ಇಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಾಟದಲ್ಲಿ ಪ್ರಮುಖ ಬ್ಯಾರ್ ಆಗಿರುವ ಬಟ್ಲರ್ ವಿಕೆಟ್ ಅನ್ನು ದಿಗ್ವೇಶ್ ರಾಠಿ ಪಡೆದುಕೊಂಡರು. ಇದೇ ಖುಷಿಯಲ್ಲಿ ರಾಠಿ ತಮ್ಮ ಸೆಲೆಬ್ರೇಶನ್ ಮಾಡುವುದನ್ನು ಮಾತ್ರ ಮಿಸ್ ಮಾಡಲಿಲ್ಲ.
ವಿಕೆಟ್ ಕಬಳಿಸಿದ ಬೆನ್ನಲ್ಲೇ ಮೈದಾನದಲ್ಲಿ ಬರೆದು ಸೈನ್ ಆಫ್ ಸಿಗ್ನೇಚರ್ ಸೆಲೆಬ್ರೇಶನ್ ಅನ್ನು ಮುಂದುವರೆಸಿದರು.
ಇಂದು ನಡೆಯುತ್ತಿರುವ ಐಪಿಎಲ್ 2025ರ ಪಂದ್ಯಾಟದಲ್ಲಿ ಜಿಟಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಎದುರಿಸುತ್ತಿದೆ. ಟಾಸ್ ಗೆದ್ದ ಲಕ್ನೋ ಮೊದಲು ಪೀಲ್ಡಿಂಗ್ ಆಯ್ದುಕೊಂಡು ಜಿಟಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಉತ್ತಮ ಆರಂಭದೊಂದಿಗೆ ಜಿಟಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು.