Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಟೆಸ್ಟ್ ನಲ್ಲಿ ನೂತನ ದಾಖಲೆ ಬರೆದ ಕೊಹ್ಲಿ, ಧವನ್

ಶ್ರೀಲಂಕಾ ಟೆಸ್ಟ್ ನಲ್ಲಿ ನೂತನ ದಾಖಲೆ ಬರೆದ ಕೊಹ್ಲಿ, ಧವನ್
ಗಾಲೆ , ಶನಿವಾರ, 29 ಜುಲೈ 2017 (09:21 IST)
ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಶಿಖರ್ ಧವನ್ ನೂತನ ದಾಖಲೆ ನಿರ್ಮಿಸಿದ್ದಾರೆ.


ದ್ವಿತೀಯ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿರುವ ಕೊಹ್ಲಿ ವಿದೇಶೀ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ 1000 ರನ್ ಮಾಡಿದ ದಾಖಲೆ ಮಾಡಿದರು. ದ್ವಿತೀಯ ಇನಿಂಗ್ಸ್ ನ 33 ನೇ ಓವರ್ ನಲ್ಲಿ ಅವರು ಈ ದಾಖಲೆ ಮಾಡಿದರು.

ಇನ್ನೊಂದೆಡೆ ಆರಂಭಿಕ ಶಿಖರ್ ಧವನ್ ಕೂಡಾ ವಿನೂತನ ದಾಖಲೆ ಮಾಡಿದ್ದಾರೆ. ಪ್ರಥಮ ಇನಿಂಗ್ಸ್ ಲ್ಲಿ ಮೊದಲ ದಿನವೇ ಶತಕ ಗಳಿಸಿದ್ದ ಅವರು ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಮತ್ತು ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಅಪರೂಪದ ದಾಖಲೆ ಸರಿಗಟ್ಟಿದ್ದಾರೆ.  ಎರಡು ಬಾರಿ ಮೊದಲ ದಿನ ಶತಕ ಗಳಿಸಿದ ದಾಖಲೆಯಲ್ಲಿ ಅವರೀಗ ಮೂರನೆಯವರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೆಸ್ ಆಡಿದ್ದಕ್ಕೂ ಬೈಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಕೈಫ್