Select Your Language

Notifications

webdunia
webdunia
webdunia
webdunia

ಚೆಸ್ ಆಡಿದ್ದಕ್ಕೂ ಬೈಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಕೈಫ್

ಚೆಸ್ ಆಡಿದ್ದಕ್ಕೂ ಬೈಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಕೈಫ್
ನವದೆಹಲಿ , ಶನಿವಾರ, 29 ಜುಲೈ 2017 (09:07 IST)
ನವದೆಹಲಿ: ಇತ್ತೀಚೆಗೆ ಮುಸ್ಲಿಂ ಧರ್ಮಕ್ಕೆ ಸೇರಿದ ಕ್ರಿಕೆಟಿಗರ ಮೇಲೆ ಸಂಪ್ರದಾಯವಾದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯುವುದು ಸಾಮಾನ್ಯವಾಗಿದೆ. ಇದೀಗ ಮತ್ತೊಮ್ಮೆ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕಟ್ಟಾ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಅಸಲಿಗೆ ಆದದ್ದು ಇಷ್ಟೇ. ಮಗನ ಜತೆ ಚೆಸ್ ಆಡುತ್ತಿರುವ  ಫೋಟೋವನ್ನು ಮೊಹಮ್ಮದ್ ಕೈಫ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದರು. ಇದು ಇಸ್ಲಾಂ ವಿರೋಧಿ ಎಂದು ಸಂಪ್ರದಾಯವಾದಿಗಳು ಕೈಫ್ ಗೆ ಬೈಯ್ದಿದ್ದಾರೆ.

ನೀವು ಯಾವತ್ತೂ ಮುಸ್ಲಿಂ ಧರ್ಮದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೀರಾ? ಚೆಸ್ ಆಡುವುದು ಇಸ್ಲಾಂ ವಿರೋಧಿ ಎಂದು ಕಿಡಿ ಕಾರಿದ್ದಾರೆ. ಹಿಂದೊಮ್ಮೆ ಕೈಫ್ ಸೂರ್ಯ ನಮಸ್ಕಾರ ಮಾಡುವ ಫೋಟೋ ಪ್ರಕಟಿಸಿದ್ದಕ್ಕೂ ಬೈಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಿಟಿ ಉಷಾ, ಸೆಹ್ವಾಗ್ ಗೆ ಪ್ರಶಸ್ತಿ ಆರಿಸುವ ನೌಕರಿ!