Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಒಂದೇ ದಿನಕ್ಕೆ ಮಾಡುವ ಸಂಪಾದನೆ ಎಷ್ಟು ಗೊತ್ತಾಗಬೇಕೇ?

ವಿರಾಟ್ ಕೊಹ್ಲಿ ಒಂದೇ ದಿನಕ್ಕೆ ಮಾಡುವ ಸಂಪಾದನೆ ಎಷ್ಟು ಗೊತ್ತಾಗಬೇಕೇ?
Mumbai , ಮಂಗಳವಾರ, 21 ಫೆಬ್ರವರಿ 2017 (09:22 IST)
ಮುಂಬೈ: ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕನಾದಾಗಿನಿಂದ ಅವರ ಬ್ರ್ಯಾಂಡ್ ವಾಲ್ಯೂ ಹೆಚ್ಚಾಗಿದೆ. ಒಂದು ದಿನಕ್ಕೆ ಅವರು ಮಾಡುವ ಸಂಪಾದನೆ ಎಷ್ಟು ಗೊತ್ತೇ?!

 
ಬರೋಬ್ಬರಿ 4 ಕೋಟಿ ರೂ. ಟೆಸ್ಟ್ ಕ್ರಿಕೆಟ್ ನಲ್ಲಿ ಸತತವಾಗಿ ನಾಲ್ಕು ದ್ವಿಶತಕ ಸಿಡಿಸಿ ಅದ್ಭುತ ಫಾರ್ಮ್ ನಲ್ಲಿರುವ ಕೊಹ್ಲಿ ಇದೀಗ 17 ಕ್ಕೂ ಹೆಚ್ಚು ಕಂಪನಿಗಳ ರಾಯಭಾರಿ. “ಹುಡುಗರು ಕೊಹ್ಲಿಯಂತೆ ಇರಲು ಬಯಸುತ್ತಾರೆ. ಹುಡುಗಿಯರಿಗೆ ಕೊಹ್ಲಿ ಮೇಲೆ ಹುಚ್ಚು ಪ್ರೀತಿ. ಸಹಜವಾಗಿಯೇ ಹಲವು ಉತ್ಪನ್ನಗಳಿಗೆ ಅವರೇ ಫೇವರಿಟ್” ಎಂದು ಗೇಮ್ಸ್ ಅನ್ ಲಿಮಿಟೆಡ್ ನ ಅತುಲ್ ಶ್ರೀವಾಸ್ತವ ಹೇಳುತ್ತಾರೆ.

ಕೊಹ್ಲಿ ಸದ್ಯಕ್ಕೆ ದಿನವೊಂದಕ್ಕೆ 4 ಕೋಟಿ ಬಿಲ್ ಮಾಡುತ್ತಾರೆ. ಒಂದು ಕಾಲದಲ್ಲಿ ಸಚಿನ್ ತೆಂಡುಲ್ಕರ್, ಧೋನಿ ವೃತ್ತಿಜೀವನವಿದ್ದಂತೆ ಇದೀಗ ಕೊಹ್ಲಿಯ ಜಮಾನ. ಹೀಗಾಗಿ ಒಂದು ಕಾಲದಲ್ಲಿ ವರ್ಷಕ್ಕೆ 10 ಕೋಟಿ ಪಡೆಯುತ್ತಿದ್ದವರು, ಇಂದು ದಿನಕ್ಕೆ 4 ಕೋಟಿ ಪಡೆಯುವಷ್ಟು ಬೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೂಲಿ ಕಾರ್ಮಿಕನ ಮಗನಿಗೆ ಐಪಿಎಲ್`ನಲ್ಲಿ 3 ಕೋಟಿ