ಈ ಬಾರಿಯ ಐಪಿಎಲ್ ಬಿಡ್ಡಿಂಗ್`ನಲ್ಲಿ ಗಮನ ಸೆಳೆದ ಆಟಗಾರರಲ್ಲಿ ತಮಿಳುನಾಡಿನ ಎಡಗೈ ಸ್ಪಿನ್ನರ್ ತಂಗರಸು ನಟರಾಜನ್ ಕೂಡ ಒಬ್ಬರು. ತಮಿಳುನಾಡು ಪ್ರೀಮಿಯರ್ ಲೀಗ್`ನಲ್ಲಿ ದಿಂಡಿಗಲ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಈತನನ್ನ ಪಂಜಾಬ್ ತಂಡ 3 ಕೋಟಿ ರೂಪಾಯಿಗೆ ಖರೀದಿಸಿದೆ.
ಅಂದಹಾಗೆ, ತಂಗರಸು ತೀರಾ ಬಡ ಕುಟುಂಬದಿಂದ ಬಂದ ಟಗಾರನಾಗಿದ್ದು, ತಂದೆ ಗಾರ್ಮೆಂಟ್ಸ್`ನಲ್ಲಿ ದಿನಗೂಲಿ ಕೆಲಸಗಾರರಾಗಿದ್ದು, ತಾಯಿ ಸಣ್ಣ ಗೂಡಂಗಡಿ ನಡೆಸುತ್ತಿದ್ದಾರೆ.