Select Your Language

Notifications

webdunia
webdunia
webdunia
webdunia

ಆಕಾಂಕ್ಷ ರಂಜನ್ ಜತೆಗಿನ ಲಿಂಕ್ ಅಪ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತಾ?

ಕೆಎಲ್ ರಾಹುಲ್
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಮೋಸ್ಟ್ ಹ್ಯಾಂಡ್ಸಮ್ ಕೆಎಲ್ ರಾಹುಲ್ ಹೆಸರು ಆಗಾಗ ಬೇರೆ ಬೇರೆ ನಟಿಯರ ಜತೆ ಕೇಳಿಬರುತ್ತಿದೆ. ಇತ್ತೀಚೆಗೆ ರಾಹುಲ್ ಮತ್ತು ನಟಿ ಅಲಿಯಾ ಭಟ್ ಸ್ನೇಹಿತೆ ಆಕಾಂಕ್ಷ ರಂಜನ್ ಜತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿತ್ತು.


ಈ ಬಗ್ಗೆ ಸ್ವತಃ ರಾಹುಲ್ ಗೇ ಪ್ರಶ್ನಿಸಿದಾಗ ಅವರು ತಮ್ಮಿಬ್ಬರ ನಡುವಿನ ಸಂಬಂಧವೇನೆಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ನಾನು ಕ್ರಿಕೆಟ್ ಗೆ ಕಮಿಟ್ ಆಗಿದ್ದೇನೆ ಎಂದಿದ್ದಾರೆ ರಾಹುಲ್.

ನೀವು ಆಕಾಂಕ್ಷ ಜತೆ ಕಮಿಟ್ ಆಗಿದ್ದೀರಾ ಎಂಬ ಪ್ರಶ್ನೆಗೆ ರಾಹುಲ್ ‘ಇಂತಹ ಸುದ್ದಿಯೆಲ್ಲಾ ಓಡಾಡುತ್ತಿದೆಯಾ? ನಾನು ಪೇಪರ್ ಓದಲ್ಲ. ಹಾಗಾಗಿ ನನಗೆ ಈ ವಿಚಾರಗಳೆಲ್ಲಾ ಗೊತ್ತೇ ಆಗಲ್ಲ. ನಾನು ನನ್ನ ವೈಯಕ್ತಿಕ ಜೀವನವನ್ನು ವೈಯಕ್ತಿಕವಾಗಿ ಇಡಲು ಬಯಸುತ್ತೇನೆ. ಸದ್ಯಕ್ಕೆ ನಾನು ಕ್ರಿಕೆಟ್ ಜತೆ ಕಮಿಟ್ ಆಗಿದ್ದೇನೆ’ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ವಿನಯ್ ಕುಮಾರ್