Select Your Language

Notifications

webdunia
webdunia
webdunia
webdunia

ಟೆಸ್ಟ್ ನಿಂದಲೂ ಓಪನಿಂಗ್ ಜಾಗ ಖಾಲಿ ಮಾಡಬೇಕಾಗುತ್ತಾ ಕೆಎಲ್ ರಾಹುಲ್?!

ಟೆಸ್ಟ್ ನಿಂದಲೂ ಓಪನಿಂಗ್ ಜಾಗ ಖಾಲಿ ಮಾಡಬೇಕಾಗುತ್ತಾ ಕೆಎಲ್ ರಾಹುಲ್?!
ಮುಂಬೈ , ಶುಕ್ರವಾರ, 6 ಸೆಪ್ಟಂಬರ್ 2019 (09:32 IST)
ಮುಂಬೈ: ಟೀಂ ಇಂಡಿಯಾದಲ್ಲಿ ಏಕದಿನ ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಈಗ ಟೆಸ್ಟ್ ಪಂದ್ಯದಲ್ಲೂ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.


ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಕ್ಲಿಕ್ ಆಗುವುದರೊಂದಿಗೆ ಆರಂಭಿಕ ಸ್ಥಾನ ಸಿಗದೇ ಮಧ್ಯಮ ಕ್ರಮಾಂಕದಲ್ಲಿ ಕೆಲವು ಪಂದ್ಯ ಆಡಿದ್ದ ಕೆಎಲ್ ರಾಹುಲ್ ರನ್ನು ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನಲೆಯಲ್ಲಿ ಆಡುವ ಬಳಗದಿಂದಲೇ ಹೊರಗಿಡಲಾಯಿತು.

ಆದರೆ ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಖಾಯಂ ಓಪನರ್ ಆಗಿದ್ದರು. ಆದರೆ ಈಗ ಸುದೀರ್ಘ ಮಾದರಿಯ ಪಂದ್ಯದಲ್ಲೂ ರಾಹುಲ್ ರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಇದರ ಪರಿಣಾಮ ಟೆಸ್ಟ್ ನಲ್ಲಿ ಅವಕಾಶ ವಂಚಿತರಾಗಿರುವ ರೋಹಿತ್ ಶರ್ಮಾರನ್ನು ಆರಂಭಿಕರಾಗಿಸಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ. ಹೀಗಾಗಿ ಟೆಸ್ಟ್ ನಿಂದಲೂ ರಾಹುಲ್ ಹೊರ ಹೋಗುವ ಅಪಾಯದಲ್ಲಿದ್ದಾರೆ. ಮುಂಬರುವ ತವರಿನ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ದಿನ ಕೈಯಲ್ಲಿ ಡ್ರಿಂಕ್ಸ್ ಗ್ಲಾಸ್! ಟ್ರೋಲ್ ಆದ ಕೋಚ್ ರವಿಶಾಸ್ತ್ರಿ