Publish Date: Fri, 06 Sep 2019 (09:24 IST)
Updated Date: Fri, 06 Sep 2019 (09:29 IST)
ಜಮೈಕಾ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಶಿಕ್ಷಕರ ದಿನ ಅವರು ಮಾಡಿದ ಪೋಸ್ಟ್ ಒಂದು ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದೆ.
ಕೈಯಲ್ಲಿ ಡ್ರಿಂಕ್ಸ್ ಗ್ಲಾಸ್ ಹಿಡಿದು ಬೀಚ್ ಬದಿಯಲ್ಲಿ ಆರಾಮವಾಗಿ ನಿಂತಿರುವ ಪೋಸ್ ಕೊಟ್ಟ ಫೋಟೋ ಪ್ರಕಟಿಸಿರುವ ರವಿಶಾಸ್ತ್ರಿ ‘ಜಮೈಕಾ ಬಿಸಿಲು. ನನ್ನ ಎಡಕೈಯಲ್ಲಿರುವ ಪಂಚ್ ಅದ್ಭುತ ಟೇಸ್ಟಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ನೋಡಿ ಅಭಿಮಾನಿಗಳು ಶಿಕ್ಷಕರ ದಿನಕ್ಕೆ ಸರಿಯಾದ ಪೋಸ್ಟ್ ಹಾಕಿದ್ದೀರಾ ಬಿಡಿ ಎಂದು ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹಲವು ಮೆಮೆಗಳ ಮೂಲಕ ರವಿಶಾಸ್ತ್ರಿಯನ್ನು ಲೇವಡಿ ಮಾಡಿದ್ದಾರೆ. ಕೆಲವರು ರವಿಶಾಸ್ತ್ರಿಯ ಉಬ್ಬು ಹೊಟ್ಟೆಯನ್ನು ಮತ್ತೆ ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾ ಗೆಲುವಿನಲ್ಲಿ ನಿಮ್ಮ ಪಾತ್ರ ಅಷ್ಟೇ ಇರೋದು ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.