Publish Date: Thu, 19 Jan 2017 (09:50 IST)
Updated Date: Thu, 19 Jan 2017 (09:54 IST)
ಕಟಕ್: ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಯೋಜನೆ ಕುರಿತು ಇತ್ತೀಚೆಗೆ ಇಂಗ್ಲೆಂಡ್ ಬೌಲರ್ ಜೇಕ್ ಬಾಲ್ಸ್ ಕಾಮೆಂಟ್ ಮಾಡಿದ್ದಕ್ಕೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮಾಷೆ ಮಾಡಿದ್ದಾರೆ.
ಶಾರ್ಟ್ ಬಾಲ್ ಹಾಕಿ ಕೊಹ್ಲಿಯನ್ನು ಕಟ್ಟಿ ಹಾಕುತ್ತೇವೆ ಎಂದಿದ್ದ ಜೇಕ್ ಮಾತಿಗೆ ರಾಹುಲ್ ಮಾಡ್ರಪ್ಪಾ ಮಾಡಿ. ಅವರಿಗೆ ನನ್ನ ಶುಭ ಹಾರೈಕೆಗಳು. ಕೊಹ್ಲಿ ಶಾರ್ಟ್ ಬಾಲ್ ನಲ್ಲೂ ಬೇಕಾದಷ್ಟು ರನ್ ಮಾಡಿದ್ದಾರೆ. ನೋಡೋಣ. ಇವರೇನು ಮಾಡ್ತಾರೇಂತ” ಎಂದು ಪಂದ್ಯಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ತಮಾಷೆ ಮಾಡಿದ್ದಾರೆ.
ವಿರಾಟ್ ಕೊಹ್ಲಿಯ ಹಲವು ಶತಕಗಳನ್ನು ನೋಡಿದ ಮೇಲೆ ಶಾರ್ಟ್ ಬಾಲ್ ಎಲ್ಲಾ ಅವರಿಗೆ ಲೆಕ್ಕಕ್ಕೇ ಇಲ್ಲ ಎಂದು ನನಗನಿಸುತ್ತದೆ. ನೋಡೋಣ. ಅದೇನು ಮಾಡ್ತಾರೇಂತ. ನಮಗೇನೂ ಭಯವಿಲ್ಲ ಎಂದು ಎದುರಾಳಿಗಳಿಗೆ ಸವಾಲು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ