Select Your Language

Notifications

webdunia
webdunia
webdunia
webdunia

ಪುಣೆ ಏಕದಿನ ಶತಕ ವೀರ ಕೇದಾರ್ ಜಾದವ್ ಯಶಸ್ಸಿನ ಗುಟ್ಟೇನು ಗೊತ್ತಾ?

ಪುಣೆ ಏಕದಿನ ಶತಕ ವೀರ ಕೇದಾರ್ ಜಾದವ್ ಯಶಸ್ಸಿನ ಗುಟ್ಟೇನು ಗೊತ್ತಾ?
Mumbai , ಬುಧವಾರ, 18 ಜನವರಿ 2017 (10:08 IST)
ಮುಂಬೈ: ಮೊದಲ ಏಕದಿನ ಪಂದ್ಯದಲ್ಲಿ ಭಾರತವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಯುವ ಬ್ಯಾಟ್ಸ್ ಮನ್ ಕೇದಾರ್ ಜಾದವ್ ಯಶಸ್ಸಿನ ಗುಟ್ಟೇನೆಂದು ಬಯಲು ಮಾಡಿದ್ದಾರೆ.

ಪ್ರತೀ ಪಂದ್ಯವಾಡುವಾಗಲೂ ಇದೇ ನನ್ನ ಕೊನೆಯ ಪಂದ್ಯ ಎಂದುಕೊಂಡೇ ಕ್ರೀಸ್ ಗೆ ತೆರಳುತ್ತೇನೆ. ನನಗೆ ಇದೇ ಕೊನೆಯ ಅವಕಾಶ ಎಂದುಕೊಳ್ಳುತ್ತೇನೆ. ಕಣಕ್ಕಿಳಿದ ಮೇಲೆ ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ, ನೂರು ಪ್ರತಿಶತ ಶ್ರಮಪಡುತ್ತೇನೆ, ಇದರಿಂದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಜಾದವ್ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜತೆ ಸೇರಿಕೊಂಡು ಅದ್ಭುತ ಶತಕ ಬಾರಿಸಿದ್ದ ಜಾದವ್ ಭಾರತವನ್ನು ಅಸಾಧ್ಯ ಮೊತ್ತ ಬೆಂಬತ್ತಲು ಪ್ರಮುಖ ಪಾತ್ರ ವಹಿಸಿದ್ದರು. ಇದು ಅವರ ಏಕದಿನ ಜೀವನದ ಎರಡನೇ ಶತಕವಾಗಿತ್ತು. ಅಲ್ಲದೆ ಏಕದಿನ ಪಂದ್ಯಗಳಲ್ಲಿ ಐದನೇ ವೇಗದ ಶತಕವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕಟ್ಟಿ ಹಾಕಲು ಇಂಗ್ಲೆಂಡ್ ಬಳಿಯಿದೆಯಂತೆ ಅಸ್ತ್ರ