Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕಟ್ಟಿ ಹಾಕಲು ಇಂಗ್ಲೆಂಡ್ ಬಳಿಯಿದೆಯಂತೆ ಅಸ್ತ್ರ

ವಿರಾಟ್ ಕೊಹ್ಲಿ ಕಟ್ಟಿ ಹಾಕಲು ಇಂಗ್ಲೆಂಡ್ ಬಳಿಯಿದೆಯಂತೆ ಅಸ್ತ್ರ
Mumbai , ಬುಧವಾರ, 18 ಜನವರಿ 2017 (09:42 IST)
ಮುಂಬೈ: ಭರ್ಜರಿ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕಲು ತಲೆ ಕೆಡಿಸಿಕೊಂಡಿರುವ ಇಂಗ್ಲೆಂಡ್ ಕ್ರಿಕೆಟಿಗರು ಒಂದು ಭರ್ಜರಿ ಯೋಜನೆ ರೂಪಿಸಿದ್ದಾರಂತೆ.

ಅದನ್ನು ಸ್ವತಃ ಇಂಗ್ಲೆಂಡ್ ವೇಗಿ ಜೇಕ್ ಬಾಲ್ ಹೇಳಿಕೊಂಡಿದ್ದಾರೆ. ಶಾರ್ಟ್ ಬಾಲ್ ಬಳಸಿ ಕೊಹ್ಲಿಯನ್ನು ಕಟ್ಟಿ ಹಾಕಬಹುದು ಎಂಬುದು ಅವರ ಲೆಕ್ಕಾಚಾರ. ಟೆಸ್ಟ್ ಸರಣಿಯಲ್ಲಿ ಕಾಡಿದ್ದಲ್ಲದೆ, ಕಳೆದ ಪಂದ್ಯದಲ್ಲಿ 350 ರನ್ ಚೇಸ್ ಮಾಡಿದ ಕೊಹ್ಲಿ ಆಟ ಆಂಗ್ಲರ ನಿದ್ದೆಗೆಡಿಸಿದೆ. ಟೀಂ ಇಂಡಿಯಾ ಯಶಸ್ಸು ಕೊಹ್ಲಿ ಕೈಯಲ್ಲಿದೆ ಎನ್ನುವುದನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಅದಕ್ಕೇ ಕೊಹ್ಲಿ ಹಣಿಯಲು ಯೋಜನೆ ರೂಪಿಸುತ್ತಿದ್ದಾರೆ.

“ಹೊನಲು ಬೆಳಕಿನಲ್ಲಿ ಶಾರ್ಟ್ ಬಾಲ್ ಗಳು ಜಾರು ಸಾಧ್ಯತೆ ಹೆಚ್ಚು. ಇದರಿಂದ ಆತ ಆಟಕ್ಕೆ ಕುದುರಿಕೊಳ್ಳದಂತೆ ಮತ್ತು ಬಾಲ್ ಎತ್ತಿ ಬಾರಿಸಿದಂತೆ ನೋಡಿಕೊಳ್ಳಬೇಕು. ಆತ ನಿಜಕ್ಕೂ ಅದ್ಭುತ ಆಟಗಾರ. ಟೆಸ್ಟ್ ಸರಣಿಯಂತೆ ಏಕದಿನ ಸರಣಿಯಲ್ಲೂ ಉತ್ತಮ ಆರಂಭ ಪಡೆದಿದ್ದಾರೆ. ಆತನಿಗಾಗಿ ಕೆಲವು ಯೋಜನೆ ಸಿದ್ಧಗೊಳಿಸಿದ್ದೇವೆ. ಕೆಲವೇ ದಿನಗಳಲ್ಲಿ ಅದನ್ನು ಜಾರಿಗೊಳಿಸಲು ಸಾಧ್ಯವಾಗಬಹುದು ಎಂಬ ನಿರೀಕ್ಷೆ ನಮ್ಮದು” ಎಂದು ಜೇಕ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊನಲು ಬೆಳಕಿನಲ್ಲಿ ನೆಟ್ ಪ್ರಾಕ್ಟೀಸ್ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರು