Select Your Language

Notifications

webdunia
webdunia
webdunia
webdunia

ಕರುಣ್ ನಾಯರ್ ಗೆ ಅನಿಲ್ ಕುಂಬ್ಳೆ ಕೃಪಾಕಟಾಕ್ಷವೂ ಇಲ್ಲ!

ಕರುಣ್ ನಾಯರ್ ಗೆ ಅನಿಲ್ ಕುಂಬ್ಳೆ ಕೃಪಾಕಟಾಕ್ಷವೂ ಇಲ್ಲ!
Bangalore , ಶುಕ್ರವಾರ, 3 ಮಾರ್ಚ್ 2017 (09:41 IST)
ಬೆಂಗಳೂರು: ಕರುಣ್ ನಾಯರ್ ಮೇಲೆ ಅನಿಲ್ ಕುಂಬ್ಳೆಗೂ ಯಾಕೋ ಕರುಣೆ ತೋರುವ ಮನಸ್ಸಿಲ್ಲ. ತವರು ನೆಲದಲ್ಲೂ ಕರುಣ್ ನಾಯರ್ ಗೆ ಸ್ಥಾನ ನೀಡದೇ ಇರುವ ಬಗ್ಗೆಯೇ ಕುಂಬ್ಳೆ ಸೂಚನೆ ನೀಡಿದ್ದಾರೆ.


ಅಜಿಂಕ್ಯಾ ರೆಹಾನೆ 2 ವರ್ಷದ ಪರಿಶ್ರಮವನ್ನು ಕಡೆಗಣಿಸಿ, ಕರುಣ್ ಗೆ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಕುಂಬ್ಳೆ ಸೂಚನೆ ನೀಡಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ ಕೂಡಾ ಇದೇ ಮಾತು ಹೇಳಿದ್ದಾರೆ. ಬೆಂಗಳೂರಿನ ಪಂದ್ಯಕ್ಕೆ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅನುಭವಿ ರೆಹಾನೆಯನ್ನು ತಂಡದಿಂದ ಹೊರಗಿರಿಸುವ ಪ್ರಶ್ನೆಯೇ ಇಲ್ಲ.

ಆದರೆ ಕರುಣ್ ತ್ರಿಶತಕ ಭಾರಿಸಿದ ಬಳಕವೂ ತಂಡದಿಂದ ಹೊರಗುಳಿಯಬೇಕಾಗಿರುವುದು ದುರದೃಷ್ಟ. 5 ಬೌಲರ್ ಗಳನ್ನು ಆಡಿಸದೇ ವಿಧಿಯಿಲ್ಲ ಎಂದು ಕುಂಬ್ಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಹೈಕೋರ್ಟ್ ಬಾಗಿಲು ತಟ್ಟಿದ ಕ್ರಿಕೆಟಿಗ ಶ್ರೀಶಾಂತ್