ಮುಂಬೈ: ಇಂಗ್ಲೆಂಡ್ ನ ಮಾಜಿ ಆರಂಭಿಕ ಖ್ಯಾತ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್ ಅವರ ಸರ್ವ ಶ್ರೇಷ್ಠ ವಿಶ್ವ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಇಲ್ಲ. ಯಾವುದೇ ದಿಗ್ಗಜ ಆಟಗಾರನನ್ನೂ ಅವರು ತಮ್ಮ ಕನಸಿನ ತಂಡದಲ್ಲಿ ಸೇರಿಸದೇ ಇರುವುದು ಅಚ್ಚರಿಯುಂಟುಮಾಡಿದೆ.
ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಅವರ ಬಳಿ ತಮ್ಮ ಕನಸಿನ ತಂಡದ ಆಟಗಾರರನ್ನು ಹೆಸರಿಸಲು ಸೂಚಿಸಲಾಯಿತು. ಆದರೆ ಆ ಪಟ್ಟಿಯಲ್ಲಿ ಭಾರತ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್ ಅಥವಾ ಕಪಿಲ್ ದೇವ್ ಹೆಸರನ್ನು ಅವರು ಸೂಚಿಸಲೇ ಇಲ್ಲ. ಇವರು ಮಾತ್ರವಲ್ಲ. ಭಾರತದ ಯಾವುದೇ ಖ್ಯಾತ ಆಟಗಾರರ ಹೆಸರನ್ನೂ ಅವರು ಹೇಳಲಿಲ್ಲ.
ಭಾರತೀಯರನ್ನು ಸಂತೋಷಪಡಿಸುವುದಕ್ಕೋಸ್ಕರ ನಾನು ಇವರ ಹೆಸರನ್ನು ಹೇಳಲಾಗದು ಎಂದಿದ್ದಾರೆ ಬಾಯ್ಕಾಟ್. ಅವರ ಕನಸಿನ ತಂಡದಲ್ಲಿ ಡಾನ್ ಬ್ರಾಡ್ಮನ್, ಗ್ಯಾರಿ ಸಾಬರ್ಸ್, ವಿವಿ ರಿಚರ್ಡ್ಸ್ ಮುಂತಾದ ಖ್ಯಾತ ನಾಮರು ಸ್ಥಾನ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ