Select Your Language

Notifications

webdunia
webdunia
webdunia
webdunia

ಇಶಾಂತ್ ಶರ್ಮಾ ಮದ್ವೆ ಡೇಟ್ ಫಿಕ್ಸ್!

ಇಶಾಂತ್ ಶರ್ಮಾ ಮದ್ವೆ ಡೇಟ್ ಫಿಕ್ಸ್!
NewDelhi , ಶುಕ್ರವಾರ, 4 ನವೆಂಬರ್ 2016 (08:52 IST)
ನವದೆಹಲಿ: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಡಲು ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 9 ರಂದು ನವದೆಹಲಿಯಲ್ಲಿ ಅವರ ಮದುವೆ ಕಾರ್ಯಕ್ರಮಗಳು ನಡೆಯಲಿವೆ.

 ಬಾಸ್ಕೆಟ್ ಬಾಲ್ ಪ್ಲೇಯರ್ ಪ್ರತಿಮಾ ಸಿಂಗ್ ಇಶಾಂತ್ ಮನದೆನ್ನೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.  ಇದೇ ವರ್ಷ ಜೂನ್ ನಲ್ಲಿ ಅವರ ನಿಶ್ಚಿತಾರ್ಥ ನೆರವೇರಿತ್ತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಡುವೆಯೇ ಅವರ ವಿವಾಹ ನಡೆಯುವ ಸಾಧ್ಯತೆಯಿದೆ. ಪ್ರತಿಮಾ ಕೂಡಾ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದು, ಏಷ್ಯನ್ ಗೇಮ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಭಾರತೀಯ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಿನ್ ಬಗ್ಗೆ ಎಚ್ಚರ ಎಂದ ಕೆವಿನ್ ಪೀಟರ್ಸನ್